ನಾಪೆÉÇೀಕ್ಲು, ಡಿ. 16 : ಪೆರೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ತಿವಿದ ಪರಿಣಾಮ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿ ಮೈಸೂರಿನ ಕೆ.ಆರ್. ಅಸ್ವತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು ಗ್ರಾಮದ ಸಾಬು ಅವರ ಮಗ ಉದಯ ಮತ್ತು ಅಪ್ಪಣ್ಣ ಅವರ ಮಗ ಅಶೋಕ ಮತ್ತಿತರರು ಸಮಾರಂಭವೊಂದಕ್ಕೆ ತೆರಳಿ ಹಿಂತಿರುಗುವ ಸಂದರ್ಭ ದಾರಿಯಲ್ಲಿ ಉದಯ ಮತ್ತು ಅಶೋಕ ನಡುವೆ ಕಲಹವಾಗಿದ್ದು, ಉದಯನಿಗೆ ಅಶೋಕ ಚೂರಿಯಿಂದ ಇರಿದಿದ್ದಾನೆ ಬಳಿಕ ಪರಾರಿಯಾಗಿದ್ದಾನೆ. ನಾಪೆÉÇೀಕ್ಲು ಪೊಲೀಸರು ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.