ಮಡಿಕೇರಿ, ಡಿ. 15: ಪ್ರಸಿದ್ಧ ಸಾಹಿತಿಯಾಗಿರುವ ದಿವಂಗತ ಬಾಚಮಾಡ ಡಿ. ಗಣಪತಿ ಅವರ ಸ್ಮರಣಾರ್ಥವಾಗಿ ಅವರು ಜನಿಸಿದ ದಿನವಾದ ಜೂನ್ 16 ರಂದು ಜಿಲ್ಲಾ ಮಟ್ಟದಲ್ಲಿ ಅವರ ಜಯಂತಿಯೊಂದಿಗೆ ಸಾಂಸ್ಕøತಿಕ ಸ್ಪರ್ಧೆಯನ್ನು ಏರ್ಪಡಿಸುವಂತೆ ಬ್ರಹ್ಮಗಿರಿ ಕೊಡವ ಭಾಷಾ ಪತ್ರಿಕೆಯ ಸಂಪಾದಕ ಹಾಗೂ ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಉಳ್ಳಿಯಡ ಎಂ. ಪೂವಯ್ಯ ಅವರು ಸಲಹೆ ನೀಡಿದ್ದಾರೆ.
ಬೆಸಗೂರಿನಲ್ಲಿ ಕೊಡವ ಅಕಾಡೆಮಿಯ ಮೂಲಕ ಜರುಗಿದ ಬಿ.ಡಿ. ಗಣಪತಿ ಅವರ ನೂರಾಂಡ್ ನಮ್ಮೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಾಹಿತಿಯ ಸಾಧನೆಗಳ ಬಗ್ಗೆ ಮೆಲುಕು ಹಾಕಿದರು.
ಕನ್ನಡ ಸಾಹಿತ್ಯ ಪರಿಷತ್ನಿಂದ ಕೊಡಗಿನ ಗೌರಮ್ಮ ಸೇರಿದಂತೆ ವಿವಿಧ ದತ್ತಿನಿಧಿ ಸ್ಥಾಪಿಸಿರುವಂತೆ ಕೊಡವ ಅಕಾಡೆಮಿಯಿಂದಲೂ ಈ ಕಾರ್ಯ ಮಾಡಬಹುದು. ಅವರ ಹೆಸರನ್ನು ಪೊನ್ನಂಪೇಟೆ ಅಥವಾ ಇತರ ಎಲ್ಲಾದರು ಇಡುವಂತಾಗ ಬೇಕು. ಅವರ ಹೆಸರಿನಲ್ಲಿ ಮಕ್ಕಳಿಗೆ ಸಹಾಯಧನ ನೀಡಿ ಪ್ರೋತ್ಸಾಹಿ ಸುವಂತಾಗಬೇಕೆಂದು ಅವರು ಹೇಳಿದರು.
ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಸೇರಿದಂತೆ ಹಲವರು ಪಾಲ್ಗೊಂಡಿ ದ್ದರು. ಈ ಸಂದರ್ಭ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.