ಡಿಸೆಂಬರ್ 18ನ್ನು ಅಲ್ಪಸಂಖ್ಯಾತರ ಹಕ್ಕಿನ ದಿನವೆಂದು ಆಚರಿಸಲಾಗುವುದು. ವಿಶ್ವ ಸಂಸ್ಥೆಯ ವ್ಯಾಖ್ಯೆಯೊಂದರಂತೆ ‘ಒಂದು ಜನಸಂಖ್ಯೆಯಲ್ಲಿನ ಬಹುತೇಕ ಜನರಿಗಿಂತ ಸ್ಪಷ್ಟವಾಗಿ ಬೇರೆಯಾಗಿದ್ದು, ಶಾಶ್ವತವಾದ ಜನಾಂಗೀಯ ಮತೀಯ ಅಥವಾ ಭಾಷಾ ಪರಂಪರೆ ಅಥವಾ ಲಕ್ಷಣ ಹೊಂದಿರುವ ಮತ್ತು ಅವುಗಳನ್ನು ಸಂರಕ್ಷಿಸಲು ಇಚ್ಛೆಪಡುವ, ಪ್ರಬಲವಲ್ಲದ ಸಮೂಹಗಳನ್ನು ಮಾತ್ರ ಅಲ್ಪಸಂಖ್ಯಾತ ಎನ್ನುವುದಾಗಿದೆ. ವಿಶ್ವ ಸಂಸ್ಥೆಯ ಮಾನವ ಹಕ್ಕುಗಳು ಸಾರ್ವತ್ರಿಕವಾಗಿವೆ. ಮೊದಲ ಎರಡು ಕಾಲಂಗಳು ಮಾನವ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಮಾನವನಿಗಿರುವ ಅಧಿಕಾರವನ್ನು ಸ್ಥಿರಪಡಿಸುತ್ತವೆ. ಇವು ಎಲ್ಲರಿಗೂ ಅನ್ವಯವಾಗುವಂತಹವು. ಕಾಲಂ 3 ರಿಂದ 15 ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ ಹಕ್ಕುಗಳನ್ನು ವಿವರಿಸುತ್ತದೆ. ಪ್ರಾಣ, ಸ್ವಾತಂತ್ರ್ಯ, ರಕ್ಷಣೆ, ವಿನಾಕಾರಣ ದಸ್ತಗಿರಿ ಮಾಡುವುದು, ಕಾನೂನು ಬದ್ಧನ್ಯಾಯ, ಸಮಾನ ನ್ಯಾಯ, ಸಂಚಾರ ಸ್ವಾತಂತ್ರ್ಯ, ರಾಷ್ಟ್ರೀಯತೆ, ಆಶ್ರಯ ಪಡೆಯುವಿಕೆ ಮುಂತಾದವು. 16ನೇ ಕಾಲಂ ಚಿಂತನೆ, ಮತ, ಭಾವನೆಗಳ ಪ್ರಕಟಣೆ ಮುಂತಾದ ಹಕ್ಕು, ಕಾಲಂ 20 ಮತ್ತು 21 ಶಾಂತಿಯುತ ಸಭೆ ನಡೆಸುವುದು, ತನ್ನ ರಾಷ್ಟ್ರದ ಸರಕಾರದ ನೀತಿಗಳಲ್ಲಿ ಪಾಲ್ಗೊಳ್ಳುವ ಹಕ್ಕು ಮುಂತಾದುವನ್ನು ವಿವರಿಸುತ್ತದೆ.
ಮತೀಯ ಅಲ್ಪಸಂಖ್ಯಾತರು, ಕುಲ ಸಂಬಂಧೀ ಅಲ್ಪಸಂಖ್ಯಾತರು, ಭಾಷಾ ಅಲ್ಪಸಂಖ್ಯಾತರು ಇದ್ದಾರೆ. ಭಾರತ ದೇಶದ ಸಂವಿಧಾನ 15, 16, 17, 38 ಮತ್ತು 4ನೇ ವಿಧಿಗಳ ಮುಖಾಂತರ ಧರ್ಮ, ಜಾತಿ, ಹುಟ್ಟು, ಜನ್ಮಸ್ಥಳ, ಭಾಷೆ, ಲಿಂಗ ಮುಂತಾದ ಆಧಾರದ ಮೇಲೆ ಪ್ರಜೆಗಳಲ್ಲಿ ವ್ಯತ್ಯಾಸ ಕಲ್ಪಿಸುವುದರ ವಿವರವಿದೆ. ಅಲ್ಪಸಂಖ್ಯಾತರ ಹಿತರಕ್ಷಣೆಗೆಂದೇ ಸಂವಿಧಾನದ 29 ಮತ್ತು 30ನೇ ವಿಧಿ ಸೃಷ್ಟಿಸಲಾಯಿತು.
ಮುಸ್ಲಿಮರು, ಕ್ರೈಸ್ತರು, ಪಾರ್ಸಿಗಳು, ಆಂಗ್ಲೋ ಇಂಡಿಯನ್ರು ಅಲ್ಪಸಂಖ್ಯಾತರಾಗಿದ್ದಾರೆ. ಮುಸ್ಲಿಮರು ಕಾಶ್ಮೀರ ಪ್ರಾಂತ್ಯದಲ್ಲಿ ಶೇ. 65ಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಲಕ್ಷದೀಪ, ಮಿನಿಕಾಯ ದ್ವೀಪಗಳಲ್ಲಿ ಶೇ. 90ಕ್ಕೂ ಅಧಿಕವಿದ್ದಾರೆ. ಅತ್ಯುನ್ನತ ಸ್ಥಾನ ಅಲಂಕರಿಸಿದವರಲ್ಲಿ ಡಾ. ಜಾಕೀರ್ ಹುಸೇನ್, ಪಕ್ರುದ್ದೀನ್ ಆಲಿ ಅಹ್ಮದ್, ಅಬ್ದುಲ್ ಕಲಾಂ ಸೇರುತ್ತಾರೆ. ವಿಶ್ವ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಕ್ರೈಸ್ತಿ ಅವರು ನಾಗಾಲ್ಯಾಂಡ್, ಮಿಜೋರಾಂಗಳಲ್ಲಿ ಕಾಲಂ 20 ಮತ್ತು 21 ಶಾಂತಿಯುತ ಸಭೆ ನಡೆಸುವುದು, ತನ್ನ ರಾಷ್ಟ್ರದ ಸರಕಾರದ ನೀತಿಗಳಲ್ಲಿ ಪಾಲ್ಗೊಳ್ಳುವ ಹಕ್ಕು ಮುಂತಾದುವನ್ನು ವಿವರಿಸುತ್ತದೆ.
ಮತೀಯ ಅಲ್ಪಸಂಖ್ಯಾತರು, ಕುಲ ಸಂಬಂಧೀ ಅಲ್ಪಸಂಖ್ಯಾತರು, ಭಾಷಾ ಅಲ್ಪಸಂಖ್ಯಾತರು ಇದ್ದಾರೆ. ಭಾರತ ದೇಶದ ಸಂವಿಧಾನ 15, 16, 17, 38 ಮತ್ತು 4ನೇ ವಿಧಿಗಳ ಮುಖಾಂತರ ಧರ್ಮ, ಜಾತಿ, ಹುಟ್ಟು, ಜನ್ಮಸ್ಥಳ, ಭಾಷೆ, ಲಿಂಗ ಮುಂತಾದ ಆಧಾರದ ಮೇಲೆ ಪ್ರಜೆಗಳಲ್ಲಿ ವ್ಯತ್ಯಾಸ ಕಲ್ಪಿಸುವುದರ ವಿವರವಿದೆ. ಅಲ್ಪಸಂಖ್ಯಾತರ ಹಿತರಕ್ಷಣೆಗೆಂದೇ ಸಂವಿಧಾನದ 29 ಮತ್ತು 30ನೇ ವಿಧಿ ಸೃಷ್ಟಿಸಲಾಯಿತು.
ಮುಸ್ಲಿಮರು, ಕ್ರೈಸ್ತರು, ಪಾರ್ಸಿಗಳು, ಆಂಗ್ಲೋ ಇಂಡಿಯನ್ರು ಅಲ್ಪಸಂಖ್ಯಾತರಾಗಿದ್ದಾರೆ. ಮುಸ್ಲಿಮರು ಕಾಶ್ಮೀರ ಪ್ರಾಂತ್ಯದಲ್ಲಿ ಶೇ. 65ಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಲಕ್ಷದೀಪ, ಮಿನಿಕಾಯ ದ್ವೀಪಗಳಲ್ಲಿ ಶೇ. 90ಕ್ಕೂ ಅಧಿಕವಿದ್ದಾರೆ. ಅತ್ಯುನ್ನತ ಸ್ಥಾನ ಅಲಂಕರಿಸಿದವರಲ್ಲಿ ಡಾ. ಜಾಕೀರ್ ಹುಸೇನ್, ಪಕ್ರುದ್ದೀನ್ ಆಲಿ ಅಹ್ಮದ್, ಅಬ್ದುಲ್ ಕಲಾಂ ಸೇರುತ್ತಾರೆ. ವಿಶ್ವ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಕ್ರೈಸ್ತಿ ಅವರು ನಾಗಾಲ್ಯಾಂಡ್, ಮಿಜೋರಾಂಗಳಲ್ಲಿ ಬಹುಸಂಖ್ಯಾತರಾಗಿದ್ದಾರೆ. ಭಾರತಕ್ಕೆ ಕ್ರಿ.ಶ. 1ನೇ ಶತಮಾನದಲ್ಲಿ ಕ್ರೈಸ್ತ ಮತ ಕಾಲಿಟ್ಟಿತ್ತು. ಪಾರ್ಸಿಗಳು ಪರ್ಷಿಯಾ ದಿಂದ ಕ್ರಿ.ಶ. 8ನೇ ಶತಮಾನದಲ್ಲಿ ಆಗ ಅಲ್ಲಿ ನಡೆಯುತ್ತಿದ್ದ ಇಸ್ಲಾಮೀ ಕರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ಭಾರತಕ್ಕೆ ಬಂದರು. ಪಾರ್ಸಿಗಳಲ್ಲಿ ಕದಿಮಿ ಮತ್ತು ಶೈನ್ ಶಾಯ್ ಎಂಬ ಎರಡು ಪಂತಗಳಿವೆ. ಇವರು ಮುಂಬೈ, ಸೂರತ್, ಪೂನಾ, ಅಹ್ಮದಾಬಾದ್, ಡಾಮನ್ ಮುಂತಾದ ನಗರ ಪ್ರದೇಶಗಳಲ್ಲಿದ್ದಾರೆ. ಫೀಲ್ಡ್ ಮಾರ್ಷಲ್ ಮಾಣಿಕ್ ಷಾ, ಸಾನ್ಹಿ ಪಾಲ್ಖೀವಾಲ ಪಾರ್ಸಿ ಜನಾಂಗ ದವರಾಗಿದ್ದಾರೆ.
ಭಾರತ ಸರಕಾರ 1911 ರಲ್ಲಿ ಆಂಗ್ಲೊ ಇಂಡಿಯನ್ ಪದವನ್ನು ಅವಿಸೃತವಾಗಿ ಬಳಸಿತು. ಭಾರತ ಸಂವಿಧಾನ 366 (2ನೇ ವಿಧಿ) ಆಂಗ್ಲೊ ಇಂಡಿಯನ್ ಪದಕ್ಕೂ ವ್ಯಾಖ್ಯಾನ ಕೊಡುತ್ತದೆ. ಯುರೋಪಿ ಯನ್ ತಂದೆ ಭಾರತೀಯ ತಾಯಿಗೆ ಹುಟ್ಟಿದ ಮಕ್ಕಳನ್ನು ಆಂಗ್ಲೊ ಇಂಡಿಯನ್ ಎಂದು ಪರಿಗಣಿಸಲಾಗುತ್ತದೆ.
- ಹರೀಶ್ ಸರಳಾಯ, ಮಡಿಕೇರಿ.