ಮಡಿಕೇರಿ, ಡಿ. 16 : ಕೊಡಗು ಜಿಲ್ಲಾ ಪೆÇಲೀಸ್ ಘಟಕದಲ್ಲಿ ಖಾಲಿ ಇದ್ದ 50 ಸಶಸ್ತ್ರ ಪೆÇಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ದೈಹಿಕ ಸಾಮಥ್ರ್ಯ ಪರೀಕ್ಷೆಗೆ ರಾಜ್ಯದ ವಿವಿಧ ಕಡೆಗಳಿಂದ 197 ಅಭ್ಯರ್ಥಿಗಳು ಭಾಗವಹಿಸಿದ್ದರು.

ಬಿಜಾಪುರ, ಬಾಗಲಕೋಟೆ, ಬೀದರ್, ಬೆಳಗಾವಿ, ಹಿಂಡಿ, ಹಾಸನ, ಮೈಸೂರು ಸೇರಿದಂತೆ ವಿವಿಧೆಡೆಗಳಿಂದ ಅಭ್ಯರ್ಥಿಗಳು ದೈಹಿಕ ಸಾಮಥ್ರ್ಯ ಪರೀಕ್ಷೆ ಎದುರಿಸಿದರು. ಆರೂವರೆ ನಿಮಿಷದಲ್ಲಿ 1600 ಮೀ ಓಟ, ಹೈಜಂಪ್, ಲಾಂಗ್ ಜಂಪ್, ಪರೀಕ್ಷೆಗಳು ನಡೆಯಿತು. ಇದರಲ್ಲಿ ಅರ್ಹತೆ ಪಡೆದವರಿಗೆ ಅರ್ಹತಾ ಪತ್ರವನ್ನು ನೀಡಲಾಯಿತು.

ಅನರ್ಹಗೊಂಡ ಅಭ್ಯರ್ಥಿಗಳು ಬೇಸರದೊಂದಿಗೆ ಪ್ರಯತ್ನ ಮುಂದುವರೆಸುವ ವಿಶ್ವಾಸ ವ್ಯಕ್ತಪಡಿಸಿದರು. ಮೂರು ಬಾರಿ ದೈಹಿಕ ಪರೀಕ್ಷೆಯಲ್ಲಿ ಅನರ್ಹಗೊಂಡಿದೆ. ಈ ಬಾರಿ ಅರ್ಹತೆ ಪಡೆದುಕೊಂಡಿದ್ದೇನೆ. ನಿರಂತರ ಪರಿಶ್ರಮ, ಅಭ್ಯಾಸದಿಂದ ಇದು ಸಾಧ್ಯವಾಯಿತು ಎಂದು ದೈಹಿಕ ಪರೀಕ್ಷೆ ಎದುರಿಸಿದ ಬಿಜಾಪುರದ ಪರಶುರಾಮ್ ಹರ್ಷ ವ್ಯಕ್ತಪಡಿಸಿದರು.

ಮಾಜಿ ಸೈನಿಕರಿಗೆ ಮೀಸಲಾಗಿದ್ದ 6 ಹುದ್ದೆಗೆ 25 ಮಂದಿ ಭಾಗವಹಿಸಿದ್ದರು. ಕೊರೊನಾ ಹಿನ್ನೆಲೆ ಅಭ್ಯರ್ಥಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಪರೀಕ್ಷೆ ನಡೆಸಲಾಯಿತು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಮೈಸೂರು ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ಶಿವಕುಮಾರ್ ಸೇರಿದಂತೆ ಇನ್ನಿತರರು ಇದ್ದರು.