ಮಡಿಕೇರಿ, ಡಿ.16: ಮಡಿಕೇರಿ ತಾಲೂಕಿಗೆ ತಾ.22ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ 26 ಗ್ರಾ.ಪಂ.ಗಳ 267 ಕ್ಷೇತ್ರಗಳಿಗೆ 676 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳೇ ಚುನಾವಣೆ ಬಹಿಷ್ಕರಿಸಿ ನಾಮಪತ್ರ ವಾಪಸ್ ಪಡೆದು ಕಣದಿಂದ ಹಿಂದೆ ಸರಿದಿದ್ದರೆ, ಇನ್ನೆರಡು ಕ್ಷೇತ್ರಗಳಲ್ಲಿ ಮೀಸಲಾತಿಗನುಗುಣವಾಗಿಅಭ್ಯರ್ಥಿಗಳಿಲ್ಲದೆ ಯಾರೂ ಕೂಡ ನಾಮಪತ್ರ ಸಲ್ಲಿಸಿಲ್ಲ. ಈ ನಡುವೆ ತಾಲೂಕಿನ ಒಟ್ಟು 14 ಪಂಚಾಯ್ತಿಗಳಿಂದ 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಡಿಕೇರಿ ತಾಲೂಕಿನಲ್ಲಿ ಒಟ್ಟು 26 ಗ್ರಾ.ಪಂಗಳಲ್ಲಿ 295 ಕ್ಷೇತ್ರಗಳಿವೆ. ಈ ಪೈಕಿ ನಾಲ್ಕು ಕೇತ್ರಗಳಲ್ಲಿ ಅಭ್ಯರ್ಥಿಗಳಿಲ್ಲದೆ ಬಾಕಿ ಉಳಿದಿದ್ದು, 24 ಮಂದಿ ಅವಿರೋಧ ಆಯ್ಕೆಯಾಗಿರುವದರಿಂದ ಇನ್ನುಳಿದ 267 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ.
ಮರು ಚುನಾವಣೆ
ಎಮ್ಮೆಮಾಡು ಗ್ರಾ.ಪಂ.ನ ಎಮ್ಮೆಮಾಡು 1 ಹಾಗೂ ಎಮ್ಮೆಮಾಡು 2 ಕ್ಷೇತ್ರಗಳಿಗೆ ಪರಿಶಿಷ್ಟ ಪಂಗಡ ಮೀಸಲಾತಿಯಿದ್ದು, ಅಭ್ಯರ್ಥಿಗಳಿಲ್ಲದ ಕಾರಣ ನಾಮಪತ್ರ ಸಲ್ಲಿಕೆಯಾಗಿಲ್ಲ. ಹೊದ್ದೂರು ಗ್ರಾ.ಪಂ. ವ್ಯಾಪ್ತಿಯ ಕುಂಬಳದಾಳು ಕ್ಷೇತ್ರಕ್ಕೆ ಬಿಸಿಎಂಎ ಮಹಿಳೆ ಹಾಗೂ ಸಾಮಾನ್ಯ ಸ್ಥಾನ ಮೀಸಲಾಗಿದ್ದು, ಒಟ್ಟು ಐವರು ನಾಮಪತ್ರ ಸಲ್ಲಿಸಿದ್ದರು. ಆದರೆ ಹಲವಾರು ವರ್ಷಗಳಿಂದ ಅಭಿವೃದ್ಧಿ ಆಗಿಲ್ಲ ಎಂಬ ಕಾರಣಕ್ಕೆ ಅಭ್ಯರ್ಥಿಗಳು ನಾಮ ಪತ್ರ ಹಿಂಪಡೆದಿದ್ದಾರೆ. ಹಾಗಾಗಿ ನಾಲ್ಕು ಕ್ಷೇತ್ರಗಳಿಗೆ ಮುಂದಿನ ದಿನಗಳಲ್ಲಿ ಮರು ಚುನಾವಣೆ ನಡೆಯಲಿದೆ.
ಅವಿರೋಧ ಆಯ್ಕೆ
14 ಪಂಚಾಯ್ತಿಗಳಿಂದ ಒಟ್ಟು 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗಾಳಿಬೀಡು ಪಂಚಾಯ್ತಿಯ ಗಾಳಿಬೀಡು 1ಕ್ಷೇತ್ರದಿಂದ 2, ಗಾಳಿಬೀಡು 2 ಕ್ಷೇತ್ರದಿಂದ 1, ಹಾಗೂ ಹಮ್ಮಿಯಾಲ ಕ್ಷೇತ್ರದಿಂದ 1, 2ನೇ ಮೊಣ್ಣಂಗೇರಿ ಕ್ಷೇತ್ರದಿಂದ 1, ಕಳಕೇರಿ ನಿಡುಗಣೆ ಪಂಚಾಯ್ತಿಯ ಕಳಕೇರಿ ನಿಡುಗಣೆ ಕ್ಷೇತ್ರದಿಂದ 2, ಹೆಬ್ಬೆಟ್ಟಗೇರಿ ಕ್ಷೇತ್ರದಿಂದ 1, ಕಡಗದಾಳು ಪಂಚಾಯ್ತಿಯ ಇಬ್ನಿವಳವಾಡಿ ಕ್ಷೇತ್ರದಿಂದ 1, ಹೊಸ್ಕೇರಿ ಗ್ರಾ.ಪಂ.ನ ಹೊಸ್ಕೇರಿ ಕ್ಷೇತ್ರದಿಂದ 1, ಹೊದ್ದೂರು ಪಂಚಾಯ್ತಿಯ ಹೊದವಾಡ2 ಕ್ಷೇತ್ರದಿಂದ 1, ಬೆಟ್ಟಗೇರಿ ಪಂಚಾಯ್ತಿಯ ಕಾರುಗುಂದ ಕ್ಷೇತ್ರದಿಂದ 1,
(ಮೊದಲ ಪುಟದಿಂದ) ಮದೆ ಪಂಚಾಯ್ತಿಯ ಬೆಟ್ಟತ್ತೂರು 2 ಕ್ಷೇತ್ರದಿಂದ 1, ಪೆರಾಜೆ ಪಂಚಾಯ್ತಿ ಯಿಂದ ಪೆರಾಜೆ2 ಕ್ಷೇತ್ರದಿಂದ 1, ಅಯ್ಯಂಗೇರಿ ಪಂಚಾಯ್ತಿಯ ಅಯ್ಯಂಗೇರಿ 1 ಹಾಗೂ ಸಣ್ಣಪುಲಿಕೋಟು ಕ್ಷೇತ್ರದಿಂದ 1, ಕುಂದಚೇರಿ ಪಂಚಾಯ್ತಿಯ ಕೋಪಟ್ಟಿ ಕ್ಷೇತ್ರದಿಂದ 1, ನಾಪೋಕ್ಲು ಪಂಚಾಯ್ತಿಯ ಕೊಳಕೇರಿ 1ರಿಂದ 3 ಹಾಗೂ ಕೊಳಕೇರಿ 2 ಕ್ಷೇತ್ರದಿಂದ 1, ಕುಂಜಿಲ ಕಕ್ಕಬ್ಬೆ ಪಂಚಾಯ್ತಿಯ ಕುಂಜಿಲ 3 ಕ್ಷೇತ್ರದಿಂದ 1, ಕೊಣಂಜಗೇರಿ ಪಂಚಾಯ್ತಿಯ ಬಲಮುರಿ ಕ್ಷೇತ್ರದಿಂದ 1, ನರಿಯಂದಡ ಪಂಚಾಯ್ತಿಯ ಚೇಲಾವರ ಕ್ಷೇತ್ರದಿಂದ 1 ಸೇರಿದಂತೆ ಒಟ್ಟು 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾ.22ರಂದು ಉಳಿದ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ತಾ.30ರಂದು ಫಲಿತಾಂಶ ಹೊರಬೀಳಲಿದೆ.
-ಸಂತೋಷ್