ಶನಿವಾರಸಂತೆ, ಡಿ. 16: ಶನಿವಾರಸಂತೆ, ಕೊಡ್ಲಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ಸ್ಗಳನ್ನು ಶನಿವಾರಸಂತೆ ಪೊಲೀಸ್ ಠಾಣೆಗೆ ಕರೆಸಿ, ಗ್ರಾ.ಪಂ. ಚುನಾವಣೆ ಸಂಬಂಧ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿಯಾಗಿ, ಅಕ್ರಮ ಚಟುವಟಿಕೆ ಯಲ್ಲಿ ತೊಡಗ ದಂತೆ ವೃತ್ತ ನಿರೀಕ್ಷಕ ಮಹೇಶ್ ಎಚ್ಚರಿಕೆ ನೀಡಿದರು.
ಈ ಸಂದರ್ಭ ಠಾಣಾಧಿಕಾರಿ ಹೆಚ್.ಇ. ದೇವರಾಜ್, ಸಹಾಯಕ ಠಾಣಾಧಿಕಾರಿಗಳಾದ ಹೆಚ್.ಎಂ. ಗೋವಿಂದ್, ಶಿವಲಿಂಗ, ಅಪರಾಧ ಪತ್ತೆದಳದ ಮುರುಳಿ, ಲೋಕೇಶ್, ಹರೀಶ್, ಪ್ರದೀಪ್, ಸಫೀರ್ ಇತರರು ಉಪಸ್ಥಿತರಿದ್ದರು.