ಪೆÇನ್ನಂಪೇಟೆ, ಡಿ. 15: ಕೋವಿಡ್-19 ಲಾಕ್ಡೌನ್ ಸಂದರ್ಭವೂ ಕರ್ನಾಟಕ ಮಹಿಳಾ ಆಯೋಗ ಕ್ರಿಯಾಶೀಲವಾಗಿ ಕೆಲಸ ಮಾಡಿದೆ. ಕೋವಿಡ್ ಸಂಬಂಧ ಲಾಕ್ಡೌನ್ ಸಂದರ್ಭದಲ್ಲಿ ರಾಜ್ಯದಲ್ಲಿ ಸುಮಾರು 425 ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಇದರಲ್ಲಿ 77 ಪ್ರಕರಣಗಳನ್ನು ಇ-ಮೇಲ್ ಮೂಲಕ ದಾಖಲಿಸಿ ಕೊಳ್ಳಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳ ನಾಯ್ಡು ಮಾಹಿತಿ ನೀಡಿದರು.
ಕೊಡಗು ಬಲಿಜ ಸಮಾಜ ಮತ್ತು ಕೊಡಗು ಕೈವಾರ ತಾತಯ್ಯ ಉತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಪೆÇನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲಾ ಸಭಾಂಗಣದಲ್ಲಿ ಜರುಗಿದ ಕೈವಾರ ತಾತಯ್ಯ ಜಯಂತೋತ್ಸವ ಮತ್ತು ‘ವರ್ಷಕ್ಕೊಂದು ಗ್ರಾಮೋತ್ಸವ' ಕಾರ್ಯಕ್ರಮ ಉದ್ಘಾಟಿಸಿ ಮತ್ತು ಸಮಾಜದ ವತಿಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಧಿಕ ದೂರು ದಾಖಲಾಗಿದೆ.
ಕರ್ನಾಟಕ ಮಹಿಳಾ ಆಯೋಗದಲ್ಲಿ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಮರ್ಯಾದ ಹತ್ಯೆ, ಪ್ರೇಮ ಪ್ರಕರಣ ಹಾಗೂ ವರದಕ್ಷಿಣೆ ಹಿಂಸೆ ಕುರಿತಂತೆ ಸುಮಾರು 1520 ಪ್ರಕರಣಗಳು ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕೊಡಗು ಬಲಿಜ ಸಮಾಜದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಮೀಳ ನಾಯ್ಡು, ಕೊಡಗು ಬಲಿಜ ಸಮಾಜ ಅತ್ಯುತ್ತಮ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿಯೇ ಹೆಸರು ಮಾಡುತ್ತಿದೆ. ಉತ್ತಮ ನಾಯಕತ್ವಗುಣ ಇರುವವರು ಆಡಳಿತ ಮಂಡಳಿಯಲ್ಲಿರುವದೇ ಯಶಸ್ಸಿಗೆ ಕಾರಣ ಎಂದು ಶ್ಲಾಘಿಸಿದರು.
ಉಚಿತ ಸಾಮೂಹಿಕ ವಿವಾಹಕ್ಕೆ ಸಹಕಾರ
ಕೊಡಗು ಬಲಿಜ ಸಮಾಜದ ಮೂಲಕ ಕಡು ಬಡತನದಲ್ಲಿರುವ ಕುಟುಂಬದ ಸದಸ್ಯರನ್ನು ಗುರುತಿಸಿ ಸಾಮೂಹಿಕ ವಿವಾಹ ನೆರವೇರಿಸುವದಿದ್ದಲ್ಲಿ ಬೆಂಗಳೂರಿನ ಮಾಜಿ ಕಾಪೆರ್Çರೇಟರ್ ರವಿಚಂದ್ರ ನೇತೃತ್ವದಲ್ಲಿ ವಧುವಿಗೆ, ತಾಳಿ, ಕಾಲುಂಗುರ, ಸೀರೆ, ಹೂವಿನ ಹಾರ, ವರನಿಗೆ ಪಂಚೆ, ಅಂಗಿ, ಬಾಸಿಂಗ, ಪೇಟ ಇತ್ಯಾದಿ ನೀಡಲಾಗುವದು. ಆರೋಗ್ಯ ಸಮಸ್ಯೆ, ಕಿಡ್ನಿ ಸಮಸ್ಯೆ ಇತ್ಯಾದಿ ಇರುವವರಿಗೆ ನಮ್ಮ ಲಯನ್ಸ್ ಪ್ರತಿಷ್ಠಾನದಿಂದ ಉಚಿತ ಡಯಾಲಿಸಿಸ್ ಮಾಡಿಸಿಕೊಳ್ಳಲು ಅವಕಾಶವಿದೆ ಎಂದು ಕರ್ನಾಟಕ ಬಲಿಜ ಸಂಘದ ಉಪಾಧ್ಯಕ್ಷ, ಬೆಂಗಳೂರು ಲಯನ್ಸ್ ಸಂಸ್ಥೆಯ ಜಿಲ್ಲಾ ಚೇರ್ಮೆನ್ ಡಾ. ಬಿ.ಎಂ. ರವಿನಾಯ್ಡು ವಿವರಿಸಿದರು.
ರಾಜ್ಯ ಬಲಿಜ ಮುಖಂಡರಾದ ಶಿರಾದ ಡಾ. ಬಿ. ಗೋವಿಂದಪ್ಪ ಮಾತನಾಡಿ, ಕೊಡಗು ಬಲಿಜ ಕ್ರೀಡೋತ್ಸವ ಈ ಹಿಂದೆ ರಾಜ್ಯ ಬಲಿಜ ಸಂಘಟನೆಗಳಿಗೆ ಮಾದರಿಯಾಗಿ ಜರುಗಿತ್ತು. ಕೈವಾರ ತಾತಯ್ಯ ಜಯಂತೋತ್ಸವ ಸಮಿತಿ ಮೂಲಕ ವರ್ಷಕ್ಕೊಂದು ಗ್ರಾಮದಲ್ಲಿ ಆಚರಣೆಗೆ ಸಮಾಜ ಬಾಂಧವರು ನಿರ್ಧರಿಸಿರುವದು ಉತ್ತಮ ಬೆಳವಣಿಗೆ ಹಾಗೂ ಪೆÇನ್ನಂಪೇಟೆ ಕಾರ್ಯಕ್ರಮ ಆಕರ್ಷಕವಾಗಿ ನೆರವೇರಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಮಾತನಾಡಿ, ಕೊಡಗು ಬಲಿಜ ಸಮಾಜ ರಾಜ್ಯಮಟ್ಟದಲ್ಲಿಯೇ ಉತ್ತಮ ಕಾರ್ಯಕ್ರಮ ನೀಡುತ್ತಾ ಬಂದಿದ್ದು, ಕೋವಿಡ್-19 ನಿಯಂತ್ರಣಕ್ಕೆ ಬಂದ ನಂತರ ದ್ವಿತೀಯ ವರ್ಷದ ಕ್ರೀಡೋತ್ಸ ವವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.
ಕೈವಾರ ತಾತಯ್ಯ ಹಾಗೂ ಮಲ್ಲಾರ ಪೂಜೆಯನ್ನು ನೆರವೇರಿಸಿದ ನಂತರ ಉತ್ಸವ ಸಮಿತಿ ಅಧ್ಯಕ್ಷ ಎಸ್.ಕೆ. ಯತಿರಾಜ್ ಉಪಸ್ಥಿತಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೂರ್ನಾಡುವಿನ ಬಲಿಜ ಮುಖಂಡ ಟಿ.ಎಲ್. ಶ್ರೀನಿವಾಸ್, ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯ, ಕೊಡಗು ಬಲಿಜ ಸಮಾಜದ ಪ್ರಮುಖರಾದ ಟಿ.ಎನ್. ಲೋಗನಾಥ್, ಟಿ.ವಿ. ಲೋಕೇಶ್, ಟಿ.ಎಂ. ಪದ್ಮಾ ಮಡಿಕೇರಿ, ಟಿ.ಆರ್. ವಿಜಯ, ಹಂಸವೇಣಿ ಯತಿರಾಜ್, ಕವಿತಾ ಶ್ರೀನಿವಾಸ್, ಬೆಕ್ಕೆಸೊಡ್ಲೂರು ಸಂದೇಶ್ ಪಾಪಯ್ಯ, ರಾಜ್ಯ ಬಲಿಜ ಸಂಘದ ಖಜಾಂಚಿ ಎನ್. ರಾಜಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.
ಖ್ಯಾತ ರಂಗಭೂಮಿ ಕಲಾವಿದ ನೀನಾಸಂ, ಸೃಷ್ಠಿ ಕೊಡಗು ರಂಗ, ತಿರುಗಾಟ ಕಾರ್ಯಕ್ರಮದಲ್ಲಿ ಅಭಿನಯಿಸಿ 50ಕ್ಕೂ ಅಧಿಕ ನಾಟಕದಲ್ಲಿ ನಟಿಸಿರುವ, ಧಾರಾವಾಹಿ ಹಾಗೂ ಚಿತ್ರ ನಟನೆಯನ್ನೂ ಮಾಡಿರುವ ಪೆÇನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಓ ಟಿ.ಎನ್. ಶ್ರೀನಿವಾಸ್ ನಾಯ್ಡು ಅವರಿಗೆ ರಂಗಕರ್ಮಿ ನೀಡಿ ಗೌರವಿಸಲಾಯಿತು.