ಕೂಡಿಗೆ: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಅವರಣದಲ್ಲಿ ಶ್ರೀ ಸತ್ಯನಾರಾಯಣ ವ್ರತಾಚರಣ ಸಮಿತಿ ವತಿಯಿಂದ ಲಕ್ಷ ದೀಪೆÇೀತ್ಸವದ ಅಂಗವಾಗಿ ದೀಪೆÇೀತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.

ದೇವರಿಗೆ ವಿಶೇಷ ಪೂಜೆ, ಅಭಿಷೇಕಗಳು ನಡೆದವು. ಈ ಸಂದರ್ಭ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬೊಳ್ಳೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕೊನೆಯ ಕಾರ್ತಿಕ ಪೂಜೆ ಅದ್ಧೂರಿಯಾಗಿ ನಡೆಯಿತು.

ಪೂಜಾ ಕಾರ್ಯದಲ್ಲಿ ಗ್ರಾಮದ ನೂರಾರು ಮಂದಿ ಭಾಗವಹಿಸಿದ್ದರು. ಒಂದು ತಿಂಗಳಿನಿಂದ ಗ್ರಾಮದ ಒಬ್ಬರಂತೆ ಪ್ರತಿದಿನ ಪೂಜೆ ನಡೆಸಿ ಕೊನೆಯ ಕಾರ್ತಿಕ ಪೂಜೆಯು ವಿಜೃಂಭಣೆಯಿಂದ ನೆರವೇರಿತು. ರಾತ್ರಿ ಅನ್ನಸಂತರ್ಪಣೆ ಕಾರ್ಯ ನಡೆಯಿತು.ನಾಪೋಕ್ಲು: ಸಮೀಪದ ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಕಾರ್ತಿಕ ಪ್ರತಿಪದಿಯಿಂದ ಆರಂಭಿಸಿದ ದೀಪಾ ರಾಧನೆಯು ಲಕ್ಷ ದೀಪೋತ್ಸವ ರಂಗ ಪೂಜಾ ಮಹೋತ್ಸವ ದೊಂದಿಗೆ ಕೊ£ Éಗೊಂಡಿತು.

ಕಾರ್ತಿಕ ಮಾಸದ ದೀಪೋತ್ಸವದ ಅಂಗವಾಗಿ ದೇವಾಲಯದಲ್ಲಿ ಪಂಚಾಮೃತಾಭಿಷೇಕ, ಕಳಸಾಭಿಷೇಕ, ಮಹಾಪೂಜೆ ನೆರವೇರಿತು. ರಮೇಶ್ ತಂತ್ರಿಗಳ ನೇತೃತ್ವದಲ್ಲಿ ಸಂಜೆ ರಂಗಪೂಜೆ ದೀಪೋತ್ಸವದೊಂದಿಗೆ ಉತ್ಸವ ಸಂಪನ್ನಗೊಂಡಿತು.

ಅರ್ಚಕ ಸುಧೀರ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಆಡಳಿತ ಮಂಡಳಿ ಪದಾಧಿಕಾರಿಗಳು ಊರಿನ ಭಕ್ತರು ಪಾಲ್ಗೊಂಡಿದ್ದರು.