ಗೋಣಿಕೊಪ್ಪ/ ವೀರಾಜಪೇಟೆ, ಡಿ,16 : ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಮಂಗಳವಾರ ನಡೆಯಿತು.

ವೀರಾಜಪೇಟೆಯ ಜಿಎಂಪಿ ಶಾಲೆ ಹಾಗೂ ಸೋಮವಾರಪೇಟೆಯ ಚನ್ನಬಸಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 999 ಶಿಕ್ಷಕರು ಮತ ಚಲಾಯಿಸಿದರು. 37 ಶಿಕ್ಷಕರು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಮಡಿಕೇರಿ ತಾಲೂಕು ಸಂಘಕ್ಕೆ ಅವಿರೋಧ ಆಯ್ಕೆ ನಡೆಯಿತು.

565 ಮತದಾರ ಶಿಕ್ಷಕರನ್ನು ಹೊಂದಿರುವ ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ 17 ಮಂದಿ ಕಣದಲ್ಲಿದ್ದರು. ಮಹಿಳಾ ಮೀಸಲಾತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉಮಾದೇವಿ (314 ಮತ), ಸೌಭಾಗ್ಯ (319), ಕವಿತಾ (259), ಪ್ರೇಮಾ (263) ಜಯಶಾಲಿಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚೇತನ್ ಹೆಚ್.ಎಸ್ (377 ಮತ), ಮಂಜುನಾಥ್ (364), ಬಸವರಾಜು (319), ಯೋಗೇಶ್ (263), ಪ್ರಸನ್ನ ಕುಮಾರ್ (251), ರವಿ (221), ಕರುಂಬಯ್ಯ (195) ಗೆಲುವು ಸಾಧಿಸಿದ್ದಾರೆ.

ವೀರಾಜಪೇಟೆ ತಾಲೂಕು ಸಂಘದ ಚುನಾವಣೆಯಲ್ಲಿ 20 ಶಿಕ್ಷಕರು ಸ್ಪರ್ಧಿಸಿದ್ದರು. ಮಹಿಳಾ ಮೀಸಲು ಕ್ಷೇತ್ರದಲ್ಲಿ ಭಾರತಿ ಸಿ.ಬಿ (249 ಮತ), ಪದ್ಮಾ (193), ಪಾರ್ವತಿ (188) ವಿಜಯಶಾಲಿಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ದೇವರಾಜ್ (254), ಅಶ್ವತ್ಥ್ (229), ಸುರೇಂದ್ರ (233), ಶಶಿಧರ್ (185), ರಮಾನಂದ (162) ಜಯಗಳಿಸಿದ್ದಾರೆ. 405 ಮತದಾರ ಶಿಕ್ಷಕರ ಪೈಕಿ 398 ಶಿಕ್ಷಕರು ಮತ ಚಲಾಯಿಸಿದರು.

ಅವಿರೋಧ ಆಯ್ಕೆ

ಮಡಿಕೇರಿ ತಾಲೂಕಿನಲ್ಲಿ 9 ಸ್ಥಾನಕ್ಕೂ ಅವಿರೋಧ ಆಯ್ಕೆ ನಡೆದಿದೆ. ಸಾಮಾನ್ಯ ಸ್ಥಾನದ ಆರು ಮತ್ತು ಮಹಿಳಾ ಮೀಸಲಿನ ಮೂರು ಸೇರಿದಂತೆ ಎಲ್ಲಾ 9 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯಿತು.

ಸಾಮಾನ್ಯ ವರ್ಗದಿಂದ ಮೋಹನ್ ಪಿ.ವಿ, ಆಕಾಶ್ ಎಂ.ಎಸ್, ಸಂದೇಶ್ ಬಿ.ಎಲ್, ಬಿ.ಎ ಉತ್ತಪ್ಪ, ರಾಜು ಹೆಚ್.ಆರ್, ಮಹಿಳಾ ಮೀಸಲಾತಿ ಕ್ಷೇತ್ರದಿಂದ ಲಲಿತಾ ವಿ.ಕೆ, ಮೀನಾಕ್ಷಿ ಎ.ಡಿ, ಜ್ಯೋತಿ ಸಿ.ಎಲ್ ಹಾಗೂ ರೇಖಾ ಕುಮಾರಿ ಡಿ.ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.