ಮಡಿಕೇರಿ, ಡಿ. 15; ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿ ಹತ್ತು ವರ್ಷ ಸಂದ ಹಿನ್ನೆಲೆಯಲ್ಲಿ ಅಕಾಡೆಮಿ ರಚನೆಯಾದ ದಿನವಾದ ಡಿ. 15ನ್ನು ಅರೆಭಾಷೆ ದಿನವೆಂದು ವಿವಿಧೆಡೆ ಆಚರಿಸಲಾಯಿತು. ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ವಿಶ್ರಾಂತ ಪ್ರಾಂಶುಪಾಲ ಬಾರಿಯಂಡ ಜೋಯಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು; ಸಣ್ಣ ಸಮುದಾಯಗಳ ಭಾಷೆಗಳನ್ನು ಉಳಿಸುವ ಕೆಲಸವಾಗಬೇಕು; ಭಾಷೆ ನಶಿಸಿದರೆ ಸಂಸ್ಕøತಿಯೇ ನಾಶವಾಗಲಿದೆ, ಹಳ್ಳಿಯ ಜನರು ಭಾಷೆ-ಸಂಸ್ಕøತಿಯ ರೂವಾರಿಗಳೆಂದು ಬಣ್ಣಿಸಿದರು. ಅರೆಭಾಷೆ ಎಂದೋ ಹುಟ್ಟಿದ ಭಾಷೆ, ಇಂದು ಆ ಭಾಷೆಗೆ ನಿರ್ಧಿಷ್ಟ ದಿನ ಗುರುತಿಸಿ ಅರೆಭಾಷೆ ದಿನಾಚರಣೆ ಮಾಡುತ್ತಿರುವದು ಸಂತಸದ ವಿಚಾರವಾಗಿದೆ; ಆಕಾಶ ನೋಡಲು ಹೇಗೆ ಯಾರಿಗೂ ಅನುಮತಿ ಬೇಡವೋ ಅದೇ ರೀತಿ ಯಾವದೇ ಭಾಷೆಯನ್ನಾಡಲು ಯಾರಿಗೂ ಅನುಮತಿ ಬೇಕಾಗಿಲ್ಲ. ಭಾಷೆಗೆ ಆಕರಣೆ, ಕಾಂತಿಯ ಗುಣವಿದೆ ಎಂದು ಹೇಳಿದರು. ನಮ್ಮ ಮಾತೃಭಾಷೆ ಹಾಗೂ ನಾವು ಕಲಿತ ಭಾಷೆಯ ನ್ನು ಎಂದಿಗೂ ಮರೆಯಬಾರದು ಎಂದು ಹೇಳಿದ ಅವರು; ನಮ್ಮ ಭಾಷೆ ಬಗ್ಗೆ ಕೀಳರಿಮೆ ಇದೆ, ಅದನ್ನು ಬಿಡಬೇಕು, ನಮ್ಮ ಭಾಷೆಯಲ್ಲಿ ಮಾತನಾಡಲು ಹಿಂದೇಟು ಹಾಕಬಾರದೆಂದು ಮನವಿ ಮಾಡಿದರು. ರಾಷ್ಟ್ರದಲ್ಲಿ 790 ಭಾಷೆಗಳಿದ್ದು ಈ ಪೈಕಿ 400 ಭಾಷೆಗಳು ಅಳಿವಿನಂಚಿನಲ್ಲಿರುವದಾಗಿ ಭಾಷಾ ಶಾಸ್ತ್ರಜ್ಞ ಗಣೇಶನ್ ದೇವಿ ಮಾಹಿತಿ ನೀಡಿದ್ದಾರೆ, ಭಾಷೆ ಅಳಿಯಲು ಬಿಡಬಾರದು, ಅರೆಭಾಷೆ ಬೆಳವಣಿಗೆಗೆ ನಮ್ಮ ಹಿರಿಯ ಸಾಹಿತಿಗಳು, ಬರಹಗಾರರು ಸೇರಿದಂತೆ ಅನೇಕ ಅನ್ಯಭಾಷಿಕರು ಕೂಡ ಶ್ರಮಿಸಿದ್ದಾರೆ, ಅವರುಗಳು ನಮಗೆ ಸ್ಪೂರ್ತಿಯಾಗಬೇಕೆಂದು ಹೇಳಿದರು.ಮುಖ್ಯ ಅತಿಥಿಗಳಾಗಿದ್ದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಅರೆಭಾಷೆ ದಿನಾಚರಣೆಗೆ ನಾಂದಿ ಹಾಡಿದ ಈ ಸುಸಂದರ್ಭ ಚರಿತ್ರೆಯಲ್ಲಿ ದಾಖಲಾಗಬೇಕು, ಎಲ್ಲ ಸಮಾಜಗಳು ಒಟ್ಟಾಗಿ ಈ ದಿನವನ್ನು ಆಚರಿಸುವಂತಾಗಬೇಕೆಂದು ಆಶಿಸಿದರು. ಕೊಡಗು ಗೌಡ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಚೀಯಂಡಿ ರಾಧಾ ಯಾದವ್ ಮಾತನಾಡಿ; ಯಕ್ಷಗಾನದಿಂದ ಭಾಷೆ, ಜ್ಞಾನದೊಂದಿಗೆ ಪೌರಾಣಿಕ ಹಿನ್ನೆಲೆಯನ್ನು ಅರಿಯಬಹುದಾಗಿದೆ, ಅಕಾಡೆÉಮಿಯಿಂದ ಇನ್ನಷ್ಟು ಇಂತಹ ಕಾರ್ಯಕ್ರಮಗಳು ಮೂಡಿಬರಲಿ ಎಂದು ಅಭಿಪ್ರಾಯಿಸಿದರು. ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಮಾತನಾಡಿ, 2011ರಲ್ಲಿ ಅರೆಭಾಷೆ ಅಕಾಡೆಮಿ ಸ್ಥಾಪನೆಯಾಗಿದ್ದು, ಹತ್ತನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಈ ಆಚರಣೆ ನಡೆಯುತ್ತಿದೆ. ಎಲ್ಲ ಸಮಾಜಗಳಲ್ಲೂ ಆಚರಿಸುವಂತಾಗಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಮಾತನಾಡಿ, ಅಕಾಡೆಮಿ ಸ್ಥಾಪನೆಗೆ ಕಾರಣೀಭೂತರಾದ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಶಾಸಕ ಕೆ.ಜಿ.ಬೋಪಯ್ಯ ಹಾಗೂ ಸಮುದಾಯದ ಹಿರಿಯರ ಶ್ರಮವನ್ನು ಸ್ಮರಿಸಿಕೊಳ್ಳಬೇಕಿದೆ ಎಂದು ಹೇಳಿದರು. 30 ವರ್ಷಗಳ ಹಿಂದೆ ದ.ಕ. ಜಿಲ್ಲೆಯಲ್ಲಿ ಶಾಲೆಗಳಲ್ಲಿ

(ಮೊದಲ ಪುಟದಿಂದ) ತುಳು ಮಾತನಾಡಿದರೆ ಶಿಕ್ಷೆಯಾಗುತ್ತಿತ್ತು; ಇದೀಗ ತುಳು ಭಾಷೆ ಮಾನ್ಯತೆ ಯೊಂದಿಗೆ ಪಠ್ಯಕ್ರಮದಲ್ಲೂ ಸೇರ್ಪಡೆಯಾಗಿದೆ; ಇದರಲ್ಲಿ ಆ ಭಾಷೆಯ ಬೆಳವಣಿಗೆಗೆ ನಡೆದ ಶ್ರಮವನ್ನು ಅರಿಯಬೇಕಿದೆ. ಅರೆಭಾಷೆಗೆ ಐಎಸ್‍ಒ ಮಾನ್ಯತೆಗೆ ಪ್ರಯತ್ನಿಸಲಾಗುತ್ತಿದೆ, ಈ ನಿಟ್ಟಿನಲ್ಲಿ ಒಂದಷ್ಟು ಸೃಜನಶೀಲ ಚಟುವಟಿಕೆ ಆಗಬೇಕಿದೆ ಎಂದು ಹೇಳಿದರು. ಮಡಿಕೇರಿ ಭಾಗದಲ್ಲಿ ಯಕ್ಷಗಾನದ ಪ್ರದರ್ಶನ ಕಡಿಮೆ ಇರುವುದರಿಂದ ಇಲ್ಲಿಯೂ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ, ಅಕಾಡೆಮಿ ದಶಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದ್ದು ಮುಂದಿನ ವರ್ಷ ಸಂಭ್ರಮದಿಂದ ಆಚರಿಸಲು ಯೋಜನೆ ರೂಪಿಸಲಾಗುತ್ತಿದೆ. ಭಾಷೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುವದೆಂದು ಹೇಳಿದರು.

ಬಳಿಕ ಅರೆಭಾಷೆಯಲ್ಲಿ ಪಂಚವಟಿ ಯಕ್ಷಗಾನ ತಾಳಮದ್ದಲೆ ಕೂಟ ನೆರವೇರಿತು. ಭಾಗವತರಾದ ಭವ್ವಶ್ರೀ ಕುಲ್ಕುಂದ ಪ್ರಥಮ ಬಾರಿಗೆ ಬರೆದ, ಸುಬ್ರಾಯ ಸಂಪಾಜೆ ಕರಡು ತಿದ್ದುಪಡಿ ಮಾಡಿದ ತಾಳಮದ್ದಲೆಯ ಹಿಮ್ಮೇಳದಲ್ಲಿ ಚಂದ್ರಶೇಖರ ಗುರುವಾಯನಕೆರೆ ಚೆಂಡೆ, ಅಕ್ಷಯ್ ರಾವ್ ವಿಟ್ಲ ಮದ್ದಲೆ, ಮುರಾರಿ ಭಟ್ ಪಂಜಿಗದ್ದೆ ಚಕ್ರತಾಳದಲ್ಲಿ ಸಹಕರಿಸಿದರೆ, ಜಯಾನಂದ ಸಂಪಾಜೆ ಶ್ರೀರಾಮನಾಗಿ, ಕೊಳತಿಗೆ ನಾರಾಯಣಗೌಡ ಲಕ್ಷ್ಮಣನಾಗಿ, ರವಿಚಂದ್ರ ಚೆಂಬು ಸೀತೆಯಾಗಿ, ಕುಸುಮಾಧರ ಎ.ಟಿ. ಋಷಿಗನಾಗಿ, ಜಬ್ಬಾರ್ ಸಮೋ ಸಂಪಾಜೆ ಶೂರ್ಪ ನಖಿಯಾಗಿ ಪಾತ್ರ ನಿರ್ವಹಿಸಿದರು.

ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ಸ್ವಾಗತಿಸಿದರೆ, ಅಕಾಡೆಮಿ ಸದಸ್ಯೆ ಬೈತಡ್ಕ ಜಾನಕಿ ಬೆಳ್ಯಪ್ಪ ಪ್ರಾರ್ಥಿಸಿದರು. ಸದಸ್ಯ ಆಗೋಳಿಕಜೆ ಧನಂಜಯ ನಿರೂಪಿಸಿದರೆ, ಡಾ. ಕೂಡಕಂಡಿ ದಯಾನಂದ ವಂದಿಸಿದರು.

ಭಾಗಮಂಡಲ: ಕರ್ನಾಟಕ ಅರೆಭಾಷಾ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸಂಸ್ಥಾಪನಾ ದಿನದ ಅಂಗವಾಗಿ ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ವತಿಯಿಂದ ಅರೆಭಾಷೆ ದಿನಾಚರಣೆಯನ್ನು ಇಂದು ಏರ್ಪಡಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯಗೌಡ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್ ಮಾತನಾಡಿ ಅರೆಭಾಷೆ ಕತೆ ಹಾಗೂ ಕವನ ರಚಿಸುವುದರ ಮೂಲಕ ಸಾಹಿತ್ಯವನ್ನು ಬೆಳೆಸುವ ಕೆಲಸವನ್ನು ಯುವಜನತೆ ಮಾಡಬೇಕಿದೆ.ಅರೆಭಾಷೆ ಕೃತಿ ಸಾಹಿತ್ಯಗಳನ್ನು ಓದಿ ತಿಳಿದುಕೊಳ್ಳುವ ಮೂಲಕ ಅರೆಭಾಷೆ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು. ಒಕ್ಕೂಟದ ವತಿಯಿಂದ ಮುಂದಿನ ದಿನಗಳಲ್ಲಿ ಜನಾಂಗಕ್ಕೆ ಸಂಸ್ಕøತಿಯನ್ನು ತಿಳಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದರು. ಒಕ್ಕೂಟದ ಕಾರ್ಯದರ್ಶಿ ಚಲನ್ ನಿಡ್ಯಮಲೆ, ನಿರ್ದೇಶಕರಾದ ಅಶ್ವಥ್ ಕುದುಕುಳಿ, ಸುನಿಲ್ ಕುಯ್ಯಮುಡಿ, ಬಾರಿಕೆ ಬಾಲಸುಬ್ರಮಣಿ, ಬಾರಿಕೆ ಶೈಲಜ, ರೋಷನ್ ಕುದುಪಜೆ

ಮತ್ತು ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ಮುಳ್ಳೂರು: ‘ಅರೆಭಾಷೆಯನ್ನು ಆಲೂರು ಸಿದ್ದಾಪುರದಲ್ಲಿ ಸಮುದಾಯದ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಮಾತನಾಡುವ ಪರಿಪಾಠವನ್ನು ಬೆಳೆಸಿಕೊಂಡರೆ ಅರೆಭಾಷೆ ಹಾಗೂ ಸಂಸ್ಕøತಿ ಅಭಿವೃದ್ಧಿ ಹೊಂದುತ್ತದೆ’ ಎಂದು ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಅಭಿಪ್ರಾಯಪಟ್ಟರು.

ಸಂಘದ ವತಿಯಿಂದ ಆಲೂರುಸಿದ್ದಾಪುರದ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಪ್ರಥಮ ವರ್ಷದ ಅರೆಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ, ಕನ್ನಡ ಭಾಷೆಯ ಉಪ ಭಾಷೆಯಾದ ಅರೆಭಾಷೆ, ಸಾಹಿತ್ಯ, ಸಂಸ್ಕøತಿಯನ್ನು ¸ಮುದಾಯದ ಮುಂದಿನ ಪೀಳಿಗೆಯವರಿಗಾಗಿ ಉಳಿಸಿ ಬೆಳೆಸುವ ಉದ್ದೇಶದಿಂದ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿಯನ್ನು ಸ್ಥಾಪಿಸಲಾಗಿದ್ದು ಇದರ ನೆನಪಿಗಾಗಿ ಡಿ.15 ರಂದು ಅರೆಭಾಷೆ ದಿನಾಚರಣೆಯನ್ನು ಆಚರಿಸುವಂತೆ ಅರೆಭಾಷೆ ಅಕಾಡೆಮಿ ಅಧ್ಯಕ್ಷರು ಸೂಚಿಸಿರುವ ಹಿನ್ನೆಲೆಯಲ್ಲಿ ನಮ್ಮ ಸಮಾಜದ ವತಿಯಿಂದ ಅರೆಭಾಷೆ ದಿನವನ್ನು ಆಚರಿಸಲಾಗುತ್ತಿದೆ ಎಂದರು. ಅರೆಭಾಷೆ, ಸಾಹಿತ್ಯ, ಸಂಸ್ಕøತಿ ಬೆಳವಣಿಗೆಗೆ ದಿನಾಚರಣೆ ಪೂರಕವಾಗುತ್ತದೆ. ಆದರೆ ಈ ವರ್ಷ ಗ್ರಾ.ಪಂ. ಚುನಾವಣೆಯ ನೀತಿ ಸಂಹಿತೆ ಮತ್ತು ಕೋವಿಡ್ ಸಮಸ್ಯೆ ಇರುವ ಕಾರಣ ದಿನಾಚರಣೆಯನ್ನು ಸರಳವಾಗಿ ಮತ್ತು ಸಾಂಕೇತಿಕವಾಗಿ ಆಚರಿಸುತ್ತಿದ್ದೇವೆ ಮುಂದಿನ ವರ್ಷಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದರು.

ಸಮಾಜದ ಉಪಾಧ್ಯಕ್ಷ ಬಟ್ಯನ ಈರಪ್ಪ ಮಾತನಾಡಿ, ಅರೆಭಾಷೆ, ಸಂಸ್ಕøತಿ ಬೆಳವಣಿಗೆಗಾಗಿ ಅಕಾಡೆಮಿಯನ್ನು ಸ್ಥಾಪಿಸಿದ್ದು, ಈ ಮೂಲಕ ಸಮುದಾಯದ ಪ್ರತಿಯೊಬ್ಬರೂ ಭಾಷೆ, ಸಂಸ್ಕøತಿ ಯನ್ನು ಬೆಳೆಸುವುದರ ಜೊತೆಯಲ್ಲಿ ಅರೆಭಾಷೆ ಅಕಾಡೆಮಿ ಯನ್ನೂ ಬೆಳೆಸಬೇಕೆಂದರು.

ಅಮ್ಮಾಜಿರ ಕಿರಣ್‍ಕುಮಾರ್ ಮಾತನಾಡಿ, ಅರಭಾಷೆ ಸಾಹಿತ್ಯ ಅಕಾಡೆಮಿ ಸ್ಥಾಪನೆಯಿಂದ ಇಂದು ಅರೆಭಾಷೆ ಮತ್ತು ಸಂಸ್ಕøತಿ ಅಭಿವೃದ್ದಿ ಹೊಂದುತ್ತಿದ್ದು, ನಮ್ಮ ಜಿಲ್ಲೆ ಸೇರಿದಂತೆ ರಾಜ್ಯದ ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿರುವ ಇತರ ಗೌಡ ಸಮುದಾಯದ ಬಾಂಧವರು ಅರೆಭಾಷೆ ಗೌಡ ಸಮುದಾಯದವರ ಸಂಸ್ಕøತಿ, ಉಡುಗೆ ತೊಡುಗೆಯನ್ನು ಅನುಸರಿಸುವಷ್ಟು ಪ್ರಭಾವ ಬೀರುತ್ತಿರುವುದು ಹೆಮ್ಮೆಯ ಬೆಳವಣಿಗೆ ಎಂದರು.

ಅರೆಭಾಷೆ, ಸಂಸ್ಕøತಿ, ಆಚಾರ - ವಿಚಾರಗಳ ಪಾಲನೆ ಕುರಿತು ಸಮುದಾಯದ ಹಿರಿಯ ಮುಖಂಡ ಅತ್ತ್ತೇಡಿ ಪೂವಯ್ಯ ಮಾತನಾಡಿದರು. ಅರೆಭಾಷೆ ಗೌಡ ಸಮಾಜದ ಕಾರ್ಯದರ್ಶಿ ಕುಯ್ಯಮುಡಿ ಜಯಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜದ ಖಜಾಂಜಿ ಅಮೆಮನೆ ರಾಮಣ್ಣ, ಸಮಾಜದ ಮಹಿಳಾ ಘಟಕದ ಪರ್ಲಕೋಟಿ ಶೈಲಾ ಸತೀಶ್ ಹಾಗೂ ಅರೆಭಾಷೆ ಗೌಡ ಸಮಾಜದ ಪ್ರಮುಖರು ಮತ್ತು ಸಮುದಾಯದ ಬಾಂಧವರು ಪಾಲ್ಗೊಂಡಿದ್ದರು.

ಮಾತೃಭಾಷೆ ಶಿಕ್ಷಣ ಅನಿವಾರ್ಯ

ಕುಶಾಲನಗರ: ಪ್ರಸಕ್ತ ಶಿಕ್ಷಣದಲ್ಲಿ ಮಾತೃಭಾಷೆ ಶಿಕ್ಷಣ ಅನಿವಾರ್ಯವಾಗಿದೆ ಎಂದು ನಿವೃತ್ತ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಅಭಿಪ್ರಾಯ ವ್ಯಕ್ತ ಪಡಿಸಿದರು. ಅವರು ಕುಶಾಲನಗರ ಗೌಡ ಸಮಾಜದಲ್ಲಿ ಅರೆಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಾಂಸ್ಕøತಿಕ ಅಕಾಡೆಮಿ ಪ್ರಾರಂಭಗೊಂಡು 10 ವರ್ಷಗಳು ಸಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕುಶಾಲನಗರ ಗೌಡ ಸಮಾಜ ಮತ್ತು ಸಹಸಂಸ್ಥೆಗಳ ಆಶ್ರಯದಲ್ಲಿ ನಡೆದ ಅರೆಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅವಿಭಕ್ತ ಕುಟುಂಬದಲ್ಲಿ ಬೆಳೆದ ಮಕ್ಕಳು ಮಾನಸಿಕವಾಗಿ ಪ್ರಬುದ್ಧ ರಾಗಿರುತ್ತಾರೆ. ಐನ್‍ಮನೆಯಲ್ಲಿ ಭಾಷೆ, ಸಂಸ್ಕøತಿಗೆ ಹೆಚ್ಚಿನ ಪ್ರಾಧಾನ್ಯತೆ ಇದ್ದು ಆ ಮೂಲಕ ಭಾಷೆ ಉಳಿಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

ಅರೆಭಾಷೆ ಅಕಾಡೆಮಿ ಸದಸ್ಯ ಕೂಡಕಂಡಿ ದಯಾನಂದ್, ಅನಂತರಾಜೇಗೌಡ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅರೆಭಾಷೆ ಇತಿಹಾಸದ ಬಗ್ಗೆ ಉಪನ್ಯಾಸ ನೀಡಿದರು. ಅರೆಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜನಾಂಗ ಬಾಂಧವರ ಜವಾಬ್ದಾರಿ ಪ್ರಮುಖವಾಗಿದ್ದು ಮುಂದಿನ ಪೀಳಿಗೆಗೆ ಈ ಬಗ್ಗೆ ಅರಿವು ಮಾಹಿತಿ ನೀಡಬೇಕಾಗಿದೆ ಎಂದರು.

ಪೆರುಬಾಯಿ ತುಳಸಿ ಸುಬ್ರಮಣ್ಯ, ಹವ್ಯಾಸ್ ಕುದುಪಜೆ, ಬೈಮನ ಬೋಜಮ್ಮ ಅವರುಗಳು ವಿಷಯ ಮಂಡಿಸಿದರು. ಸೂದನ ಲೀಲಾ ಗೋಪಾಲ್ ಪ್ರಬಂಧ ಮಂಡನೆ ಮಾಡಿದರು.

ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಕೂರನ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗೌಡ ಸಮಾಜದ ಉಪಾಧ್ಯಕ್ಷೆ ಪಟ್ಟಂದಿ ಬೀನಾ, ಕಾರ್ಯದರ್ಶಿ ಕೆ.ಎಂ. ಗಣೇಶ್, ಸಹ ಕಾರ್ಯದರ್ಶಿ ಸೆಟ್ಟೆಜನ ದೊರೆ ಗಣಪತಿ, ಖಜಾಂಚಿ ಕಡ್ಯದ ಅಶೋಕ್, ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ರೂಪಾ ಗಣೇಶ್, ಪದ್ಮಾವತಿ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಅಚ್ಚಾಂಡಿರ ಲತಾ, ಯುವಕ ಸಂಘದ ಕಾರ್ಯದರ್ಶಿ ಕುಲ್ಲಚನ ಹೇಮಂತ್ ಮತ್ತಿತರರು ಇದ್ದರು.

ಸೂದನ ಗೋಪಾಲ್ ನಿರೂಪಿಸಿದರು, ಕುಲ್ಲಚೆಟ್ಟಿರ ಪೂವಯ್ಯ ಸ್ವಾಗತಿಸಿ, ಕರಂದ್ಲಾಜೆ ಆನಂದ್ ಪ್ರಾಸ್ತಾವಿಕ ನುಡಿಗಳಾಡಿದರು, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ವಂದಿಸಿದರು.