ಗೋಣಿಕೊಪ್ಪ ವರದಿ, ಡಿ. 16: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್ ಕಮಿಟಿ, ಹಾಕಿ ಕರ್ನಾಟಕ, ಹಾಕಿ ಕೂರ್ಗ್ ವತಿಯಿಂದ ನಡೆದ ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್ನಲ್ಲಿ ಸೌತ್ಕೂರ್ಗ್ ಕ್ಲಬ್ ತಂಡ ಗೆಲುವು ಪಡೆದುಕೊಂಡಿತು. ದಿನದ ಕೊನೆಯ ಪಂದ್ಯವನ್ನು ಮಂದ ಬೆಳಕಿನ ಕಾರಣ ಗುರುವಾರಕ್ಕೆ ಮುಂದೂಡಲಾಗಿದೆ.
ಸೌತ್ಕೂರ್ಗ್ ಕ್ಲಬ್ ತಂಡವು ಗೋರ್ಸ್ ವಿರುದ್ಧ 3-2 ಗೋಲುಗಳ ಗೆಲುವು ಪಡೆಯಿತು. ಸೌತ್ಕೂರ್ಗ್ ಪರವಾಗಿ 10 ಮತ್ತು 28 ನೇ ನಿಮಿಷ ಗಳಲ್ಲಿ ಗೌತಂ 2 ಗೋಲು, 25 ನೇ ನಿಮಿಷದಲ್ಲಿ ಸಮರ್ಥ್ 1 ಗೋಲು, ಗೋರ್ಸ್ ಪರ ಮೊಹಮ್ಮದ್ ಫಾಹದ್ 14 ಮತ್ತು 38 ನೇ ನಿಮಿಷಗಳಲ್ಲಿ 2 ಗೋಲು ಹೊಡೆದರು
ಪ್ರಗತಿ ಸ್ಪೋಟ್ರ್ಸ್ ಅಕಾಡೆಮಿ ಮತ್ತು ಜಿಯಣ್ಣ ಗ್ರೂಪ್ ತಂಡಗಳ ನಡುವಿನ ಪಂದ್ಯದ ಕೊನೆಯ 8 ನೇ ನಿಮಿಷ ಉಳಿದಿರುವಾಗ ಮಂದ ಬೆಳಕಿನ ಕಾರಣ ಪಂದ್ಯ ಸ್ಥಗಿತವಾ ಯಿತು. ಪಂದ್ಯವನ್ನು ಗುರುವಾರಕ್ಕೆ ಮುಂದೂಡಲಾಗಿದ್ದು, ಮಧ್ಯಾಹ್ನ 8 ನಿಮಿಷಗಳ ಅವಧಿಯ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಪ್ರಗತಿ ಸ್ಪೋಟ್ರ್ಸ್ ಅಕಾಡೆಮಿ 2-1 ಗೋಲು ಗಳ ಮುನ್ನಡೆ ಕಾಯ್ದುಕೊಂಡಿದೆ. ಪ್ರಗತಿ ಪರ 9 ನೇ ನಿಮಿಷದಲ್ಲಿ ಬಿ.ಪಿ. ಸೋಮಣ್ಣ, 51ರಲ್ಲಿ ಎಂ.ಪಿ. ಪಳಂಗಪ್ಪ, ಜೀಯಣ್ಣ ಪರ 21ರಲ್ಲಿ ಕೆ.ಎಂ. ಯಶ್ವಂತ್ ತಲಾ ಒಂದೊಂದು ಗೋಲು ಹೊಡೆದಿದ್ದಾರೆ.
ಪಂದ್ಯ ಪುರುಷ ಬಹುಮಾನವಾದ ಮುಳಿಯ ಜ್ಯುವೆಲ್ಸ್ನ ಬೆಳ್ಳಿ ನಾಣ್ಯವನ್ನು ಸೌತ್ಕೂರ್ಗ್ ತಂಡದ ಗೌತಮ್ ತನ್ನದಾಗಿಸಿಕೊಂಡರು.
ಸಂತಾಪ ; ಬುಧವಾರ ಅನಾರೋಗ್ಯದಿಂದ ನಿಧನರಾದ ನೆಲ್ಲಮಕ್ಕಡ ಕುಟುಂಬದ ಆಟಗಾರ ನೆಲ್ಲಮಕ್ಕಡ ಸಜಿ ನಾಣಯ್ಯ ಅವರಿಗೆ ಶಾಂತಿ ಕೋರಲಾಯಿತು. ತಾಂತ್ರಿಕ ವರ್ಗ ಕಪ್ಪು ಪಟ್ಟಿ ಧರಿಸಿ ಟೂರ್ನಿ ನಡೆಸಿದರು.