ಮಡಿಕೇರಿ, ಡಿ. 16: ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ 2020-21ನೇ ಸಾಲಿನ ಸಾಮಾನ್ಯ, ಗಿರಿಜನ ಉಪಯೋಜನೆ ಹಾಗೂ ವಿಶೇಷ ಘಟಕ ಯೋಜನೆಯಡಿ ಧನಸಹಾಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
2019-20ನೇ ಸಾಲಿನಲ್ಲಿ ನಾಡಿನ ಕಲೆ, ಸಾಹಿತ್ಯ, ಸಂಗೀತ, ಜನಪದ, ನೃತ್ಯ, ನಾಟಕ ಸೇರಿದಂತೆ ಇತರ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ನೋಂದಾಯಿತ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅಸಂಘಟಿತ ತಂಡಗಳು, ಏಕವ್ಯಕ್ತ್ತಿ ಕಲಾವಿದರಿಗೆ ವಾದ್ಯ ಪರಿಕರ, ವೇಷಭೂಷಣ ಖರೀದಿಗೆ ಹಾಗೂ ಚಿತ್ರಕಲೆ ಮತ್ತು ಶಿಲ್ಪಕಲೆಗಳ ಏಕವ್ಯಕ್ತಿ, ತಂಡದ ಕಲಾವಿದರಿಗೆ ಕಲಾಕೃತಿಗಳ ಪ್ರದರ್ಶನಗಳಿಗೆ ಧನ ಸಹಾಯ ನೀಡಲಾಗುವುದು.
ಈ ಹಿನ್ನೆಲೆ ತಾ. 27 ರವರೆಗೆ ಸೇವಾ ಸಿಂಧು ಪೋರ್ಟಲ್ sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿನಲ್ಲಿ ಹಾಗೂ ತಿತಿತಿ. ಞಚಿಟಿಟಿಚಿಜಚಿsiಡಿi.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಸಬಹುದು. ಹೆಚ್ಚಿನ ಮಾಹಿತಿಗೆ 080-22230282/ 080-2279954 ಗೆ ಕರೆ ಮಾಡಬಹುದಾಗಿದೆ.