ಮಡಿಕೇರಿ, ಡಿ. 16: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಇತ್ತೀಚೆಗೆ ಚಿಗುರು ಸಾಂಸ್ಕøತಿಕ ಕಾರ್ಯಕ್ರಮವು ಚೇರಂಬಾಣೆ ಅರುಣ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಪಿ.ಎಸ್. ಸುಬ್ಬಯ್ಯ ಅವರು ಬಾಲಪ್ರತಿಭೆಗಳ ಸಾಂಸ್ಕøತಿಕ ಚಟುವಟಿಕೆಗಳಿಗೆ ಚಿಗುರು ವೇದಿಕೆಯಾಗಿದೆ. ಇಲಾಖೆಯ ಸಾಹಿತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಗ್ರಾಮೀಣ ಜನಪದ ಕಲೆಯ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದರು.
ಪ್ರಾಂಶುಪಾಲ ಡಿ.ಎಸ್. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕೋವಿಡ್-19 ಸಂದಿಗ್ಥತೆಯಲ್ಲಿಯೂ ಇಲಾಖೆಯು ಕರ್ನಾಟಕದ ಭವ್ಯ ಪರಂಪರೆಯನ್ನು ಇಂದಿನ ತಲೆಮಾರಿನ ಯುವ ಸಮೂಹಕ್ಕೆ ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿರುವುದು ಅಭಿನಂದನಾರ್ಹ ಎಂದರು.
ಸಭೆಗೆ ಚಿಗುರು ಕಾರ್ಯಕ್ರಮದ ವೈಶಿಷ್ಟ್ಯತೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್ ಪ್ರಾಸ್ತಾವಿಕ ನುಡಿಗಳೊಂದಿಗೆ ತಿಳಿಸಿದರು. ಶಿಕ್ಷಕ ಎ.ಹೆಚ್. ಸತೀಶ್ಕುಮಾರ್ ಸ್ವಾಗತಿಸಿದರು. ಪರಮೇಶ ಎಸ್.ಪಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.