ಮಡಿಕೇರಿ, ಡಿ. 16: ಕೊಡವ ಎಜುಕೇಷನ್ ಸೊಸೈಟಿ (ರಿ.), ಪೊನ್ನಂಪೇಟೆ, ಇದರ 22ನೇ ವಾರ್ಷಿಕ ಮಹಾಸಭೆ ತಾ. 19 ರಂದು ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ (ಅIಖಿ) ಆವರಣದಲ್ಲಿ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಸೊಸೈಟಿಯ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಚೆಪ್ಪುಡಿರ ಪಿ. ಬೆಳ್ಳಿಯಪ್ಪ ವಹಿಸಲಿದ್ದಾರೆ ಎಂದು (ಅIಖಿ) ಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಸಂಸ್ಥೆಯ ಉಪಾಧ್ಯಕ್ಷರುಗಳಾದ ಮುಕ್ಕಾಟಿರ ಟಿ. ನಾಣಯ್ಯ ಹಾಗೂ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ, ಕಾರ್ಯದರ್ಶಿಗಳಾದ ಚಿರಿಯಪಂಡ ಪಿ. ರಾಕೇಶ್ ಪೂವಯ್ಯ, ಜಂಟಿ ಕಾರ್ಯದರ್ಶಿ ಚಿರಿಯಪಂಡ ಎಂ. ರಾಜ ನಂಜಪ್ಪ, ಕೋಶಾಧಿಕಾರಿ ಕಟ್ಟೆರ ಎನ್. ಉತ್ತಪ್ಪ ಹಾಗೂ ಇತರ ಗೌರವಾನ್ವಿತ ಸದಸ್ಯರುಗಳು ಹಾಜರಿರಲಿದ್ದಾರೆ.