ಸಿದ್ದಾಪುರ, ಡಿ. 15: ಕಾರ್ಮಿಕ ಮಹಿಳೆಯೋರ್ವಳು ಸಂಶಯಾಸ್ಪದವಾಗಿ ಸಾವನ್ನಪ್ಪಿದ ಘಟನೆ ಗುಹ್ಯ ಗ್ರಾಮದಲ್ಲಿ ನಡೆದಿದೆ. ಗುಹ್ಯ ಗ್ರಾಮದ ನಿವಾಸಿ ಮುತ್ತ ಎಂಬವರ ಪತ್ನಿ ಸುನಿತಾ ಎಂಬವರು ಗುಹ್ಯ ಗ್ರಾಮದ ಐನಂಡ ಚೇತನ್ ಎಂಬವರಲ್ಲಿ ಕಾರ್ಮಿಕಳಾಗಿ ಕೆಲಸ ಮಾಡಿಕೊಂಡಿದ್ದರು.

ತಾ. 13 ರಂದು ಈಕೆಯ ಸಂಬಂಧಿಕರ ಮನೆ ನೆಲ್ಲಿಹುದಿಕೇರಿ ಬೆಟ್ಟದ ಕಾಡುವಿಗೆ ಗುಹ್ಯದಿಂದ ನದಿ ದಾಟಿ ಕಾಲ್ನಡಿಗೆಯಲ್ಲಿ ತೆರಳಿದ್ದಳು ಎನ್ನಲಾಗಿದೆ. ಆದರೆ ಈಕೆಯ ಮೃತದೇಹವು ನೆಲ್ಲಿಹುದಿಕೇರಿಯ ಚರ್ಚ್‍ಸೈಡ್ ಭಾಗದ ಕಾವೇರಿ ನದಿಯಲ್ಲಿ ತೇಲುತಿತ್ತು ಎಂದು ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ. ಮೃತ ಮಹಿಳೆಗೆ ಪತಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.