ಮಡಿಕೇರಿ, ಡಿ. 15 : ಗ್ರಾಮ ಪಂಚಾಯ್ತಿ ಚುನಾವಣೆ ಸಂಬಂಧ ವೀರಾಜಪೇಟೆ ತಾಲೂಕಿನ 35 ಗ್ರಾ.ಪಂಗಳ 424 ಸ್ಥಾನಗಳಿಗೆ 396 ನಾಮಪತ್ರ ಸಲ್ಲಿಕೆಯಾಗಿದೆ. 79 ಸ್ಥಾನಗಳು ನಾಮಪತ್ರ ಸಲ್ಲಿಸದೆ ಖಾಲಿ ಉಳಿದುಕೊಂಡಿದೆ.

ಅನುಸೂಚಿತ ಜಾತಿ ಸಾಮಾನ್ಯ ಕ್ಷೇತ್ರಕ್ಕೆ 15, ಮಹಿಳಾ ಕ್ಷೇತ್ರಕ್ಕೆ 31, ಅನುಸೂಚಿತ ಪಂಗಡ ಸಾಮಾನ್ಯ ಕ್ಷೇತ್ರಕ್ಕೆ 33, ಮಹಿಳಾ ಕ್ಷೇತ್ರಕ್ಕೆ 40, ಹಿಂದುಳಿದ ವರ್ಗ (ಎ) ಸಾಮಾನ್ಯ ಕ್ಷೇತ್ರಕ್ಕೆ 14, ಮಹಿಳಾ ಕ್ಷೇತ್ರಕ್ಕೆ 28, ಹಿಂದುಳಿದ ವರ್ಗ (ಬಿ) ಸಾಮಾನ್ಯ ಕ್ಷೇತ್ರಕ್ಕೆ 12, ಸಾಮಾನ್ಯ ವರ್ಗದ ಸಾಮಾನ್ಯ ಕ್ಷೇತ್ರಕ್ಕೆ 153, ಮಹಿಳಾ ಕ್ಷೇತ್ರಕ್ಕೆ 70 ನಾಮಪತ್ರ ಸಲ್ಲಿಕೆಯಾಗಿದೆ.