ಮಡಿಕೇರಿ, ಡಿ. 16 : ಸರ್ಕಾರಿ ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಮಾಧಾನ ಹಾಗೂ ಸೌಜನ್ಯದಿಂದ ವರ್ತಿಸಬೇಕೆಂದು ಸೂಚನೆ ನೀಡಿ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್.ಸಿ ಹರ್ಷರಾಣಿ ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಲಿಖಿತ ಆದೇಶವನ್ನು ಎಲ್ಲಾ ಇಲಾಖೆಗೆ ನೀಡಲಾಗಿದ್ದು, ಆಗಮಿಸಿದವರಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಬೇಕು ಎಂದು ಕೂಡ ಆದೇಶದಲ್ಲಿ ಸೂಚಿಸಲಾಗಿದೆ.