ಗುಡ್ಡೆಹೊಸೂರು, ಡಿ. 17: ಇಲ್ಲಿಗೆ ಸಮೀಪದ ಆನೆಕಾಡು ಬಳಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಪ್ಲಾಸ್ಟ್ಟಿಕ್ ಮತ್ತು ಇತರ ತ್ಯಾಜ್ಯ ವಸ್ತುಗಳನ್ನು ಸುರಿಯಲಾಗಿತ್ತು. ಈ ಸಂಬಂಧ ಕೆಲವು ಡಬ್ಬಗಳನ್ನು ನೋಡಿದಾಗ ಅದರಲ್ಲಿ ಕುಶಾಲನಗರದ ಗೌಡ ಸಮಾಜ ರಸ್ತೆಯಲ್ಲಿ ವಾಸವಿರುವ ಮಮ್ತಾಜ್ ಮಜೀದ್ ಎಂಬ ಮಹಿಳೆಯ ವಿಳಾಸ ಪತ್ತೆಯಾಗಿದೆ. ಈ ಸಂಬಂಧ ಅರಣ್ಯ ಇಲಾಖೆಯ 1963 ಕಾಯಿದೆ ಪ್ರಕಾರ, ಅರಣ್ಯ ಇಲಾಖೆ ಮತ್ತು ಗುಡ್ಡೆಹೊಸೂರು ಗ್ರಾ.ಪಂ. ವತಿಯಿಂದ ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಹೆದ್ದಾರಿ ಬಳಿ ಅರಣ್ಯಕ್ಕೆ ಕಸ ತ್ಯಾಜ್ಯಗಳನ್ನು ಸುರಿದರೆ ಅಂತಹ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸುವುದಾಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪಿ.ಡಿ.ಓ. ಶ್ಯಾಂ ಮತ್ತು ಡಿ.ಆರ್.ಎಫ್.ಓ. ಅನಿಲ್ ಡಿಸೋಜ ತಿಳಿಸಿದ್ದಾರೆ, ಈ ಸಂದರ್ಭ ಅರಣ್ಯ ರಕ್ಷಕರಾದ ಆನಂದ, ತಿಮ್ಮಯ್ಯ ಮತ್ತು ಗ್ರಾ.ಪಂ. ಸಿಬ್ಬಂದಿ ವಿಜಯ್ ಹಾಜರಿದ್ದರು. ಮುಂದಿನ ದಿನಗಳಲ್ಲಿ ಯಾರೇ ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕುವುದು ಕಂಡುಬಂದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಅರಣ್ಯ ಇಲಾಖೆ ಮತ್ತು ಗುಡ್ಡೆಹೊಸೂರು ಪಿ.ಡಿ.ಓ. ಶ್ಯಾಮ್ ತಿಳಿಸಿದ್ದಾರೆ.