1. ಕೂಡಿಗೆ, ಡಿ. 17: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಸಮೀಪವಿರುವ ಜೇನುಕಲ್ಲು ಬೆಟ್ಟದ ರಸ್ತೆ ಕಾಮಗಾರಿ ಆರಂಭವಾಗಿದ್ದು, ಈ ವ್ಯಾಪ್ತಿಯ ಜನರ ಬಹುದಿನಗಳ ಬೇಡಿಕೆಗೆ ಸ್ಪಂದನ ದೊರೆತಿದೆ.

    ಜೇನುಕಲ್ಲು ಬೆಟ್ಟದ ಸಾಲಿನ ಮಳೆಯ ನೀರು ರಸ್ತೆಯಲ್ಲಿ ಹರಿದ ಪರಿಣಾಮ ರಸ್ತೆ ತೀರಾ ಹಾಳಾಗಿತ್ತು. ಇದನ್ನು ಸರಿಪಡಿಸಲು ಅಲ್ಲಿನ ಗ್ರಾಮಸ್ಥರು ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದ್ದರು. ಅದರ ಅನ್ವಯ ಲೋಕೋಪಯೋಗಿ ಇಲಾಖೆಯ ವಿಶೇಷ ಅನುದಾನದಲ್ಲಿ ರೂ. 8 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಯು ನಡೆಯುತ್ತಿದೆ. ಕುಶಾಲನಗರ ವಿಭಾಗದ ಇಂಜಿನಿಯರ್ ಪೀಟರ್ ಕಾಮಗಾರಿ ಉಸ್ತುವಾರಿ ವಹಿಸಿದ್ದಾರೆ.