ಸೋಮವಾರಪೇಟೆ, ಡಿ. 17: ಅನಾರೋಗ್ಯದಿಂದ ಬಳಲುತ್ತಿರುವ ಸಮೀಪದ ಬಜೆಗುಂಡಿ ಗ್ರಾಮದ ಬಾಲಕಿಯೋರ್ವಳ ಚಿಕಿತ್ಸೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಹಾಯ ಧನ ವಿತರಿಸಲಾಯಿತು.
ಬಜೆಗುಂಡಿಯ ಶಾಂತಿ ಎಂಬವರ ಪುತ್ರಿ ಕಳೆದ ಎರಡು ವರ್ಷದಿಂದ ಅನಾರೋಗ್ಯಕ್ಕೀಡಾಗಿದ್ದು, ಈಕೆಯ ಚಿಕಿತ್ಸೆಗಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದ ಮೂಲಕ ರೂ. 35 ಸಾವಿರ ಧನ ಸಹಾಯ ನೀಡಿದ್ದು, ಇದನ್ನು ಯೋಜನಾಧಿಕಾರಿ ವೈ. ಪ್ರಕಾಶ್ ಅವರು ಬಾಲಕಿಗೆ ಹಸ್ತಾಂತರಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕ ಸುಬ್ರಮಣ್ಯ, ಸೇವಾ ಪ್ರತಿನಿಧಿ ಪುಷ್ಪಾವತಿ, ಸುನೀತಾ, ನವಜೀವನ ಸಮಿತಿ ಸದಸ್ಯ ರಾಮದಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.