ಸುಂಟಿಕೊಪ್ಪ, ಡಿ.17: ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಮುತ್ತಪ್ಪ ದೇವಾಲಯದ ಬಳಿ ಪ್ರತಿಷ್ಠಾಪಿಸಲ್ಪಟ್ಟಿದ್ದ ಶ್ರೀ ವಿಷ್ಣುಮೂರ್ತಿ ಶಾಸ್ತ,ಗುಳಿಗ ವಿಗ್ರಹಕ್ಕೆ ಯಾರೋ ದುಷ್ಕರ್ಮಿಗಳು ಹಾನಿ ಮಾಡಿರುವ ಬಗ್ಗೆ ಪೊಲೀಸರಿಗೆ ದೇವಾಲಯ ಜೀರ್ಣೋದ್ಧಾರ ಸಮಿತಿ ದೂರು ಸಲ್ಲಿಸಿದೆ.
ಶ್ರೀಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಮುತ್ತಪ್ಪ ದೇವಾಲಯದ ಜೀರ್ಣೋದ್ಧಾರದ ಕಾಮಗಾರಿ ನಡೆಯುತ್ತಿದ್ದು, ಈ ದೇವಾಲಯದ ಸಮೀಪದಲ್ಲಿ ಶ್ರೀವಿಷ್ಣುಮೂರ್ತಿ, ಶಾಸ್ತ ಗುಳಿಗನ ವಿಗ್ರಹ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಈ ವಿಗ್ರಹವನ್ನು ಯಾರೋ ರಾತ್ರಿ ಧ್ವಂಸಗೊಳಿಸಿದ್ದಾರೆ ಎಂದು ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೈ.ಎಂ.ಕರುಂಬಯ್ಯ, ಖಜಾಂಜಿ ಎಸ್.ಜಿ.ಶ್ರೀನಿವಾಸ್ ಹಾಗೂ ಸಮಿತಿ ಸದಸ್ಯ ಆರ್. ರಮೇಶ್ಪಿಳ್ಳೆ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ, ಪೊಲೀಸರು ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.