ಮಡಿಕೇರಿ, ಡಿ. 17: ಅಮ್ಮತ್ತಿ-ಒಂಟಿಯಂಗಡಿಯ ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ತಾ. 22 ರಂದು ಜರುಗಲಿದೆ. ಅಂದು ಬೆಳಿಗ್ಗೆ 10.30 ಗಂಟೆಗೆ ಸಂಘದ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಅಮ್ಮತ್ತಿ-ಒಂಟಿಯಂಗಡಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಸಭೆ ಜರುಗಲಿರುವು ದಾಗಿ ಪ್ರಕಟಣೆ ತಿಳಿಸಿದೆ.
ಸಂಘದಲ್ಲಿ ಈಗಾಗಲೇ ಸಂಚಯ ಠೇವಣಿ ಖಾತೆ (ಎಸ್/ಬಿ) ಹೊಂದಿರುವ ಸದಸ್ಯರು ಆಧಾರ್ ಮತ್ತು ಪಾನ್‍ಕಾರ್ಡ್ ಪ್ರತಿಯನ್ನು ಸಂಘಕ್ಕೆ ತಲುಪಿಸಲು ಕೋರಲಾಗಿದೆ.