ವೀರಾಜಪೇಟೆ ವರದಿ, ಡಿ. 17: ಮತದಾರರ ಪಟ್ಟಿಯಲ್ಲಿ ಈ ಹಿಂದೆ ಹೆಸರಿದ್ದು ಪರಿಷ್ಕøತ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೋರ್ವರು ನ್ಯಾಯಾಲಯದ ಮೊರೆಹೋಗಲು ಮುಂದಾಗಿದ್ದಾರೆ.
ವೀರಾಜಪೇಟೆ ಬೇಟೋಳಿ ಗ್ರಾಮ ಪಂಚಾಯಿತಿಯ ಹೆಗ್ಗಳ ಕ್ಷೇತ್ರದ ಮೂರನೆ ವಾರ್ಡಿನ ಮಾಕುಟ್ಟ ಗ್ರಾಮದ ನಿವಾಸಿ ಕೆ.ಕೆ. ಉಮ್ಮರ್ ನ್ಯಾಯಾಲಯದ ಮೊರೆಹೋದ ಅಭ್ಯರ್ಥಿ.
ಈ ಹಿಂದೆ ಇದ್ದ ಮತದಾರರ ಪಟ್ಟಿಯ ಕ್ರಮ ಸಂಖ್ಯೆ 20 ಟಿಎಕ್ಸ್ಎಫ್ 3197464 ಮತದಾರ ಚೀಟಿಯನ್ನು ಹೊಂದಿದ್ದ ಕೆ.ಕೆ. ಉಮ್ಮರ್ (57) ತಂದೆ ಕೆ. ಅಹಮ್ಮದ್ ಕುಟ್ಟಿ ಮತದಾರ ಪಟ್ಟಿಯಂತೆ ಸಕಲ ದಾಖಲೆಯೊಂದಿಗೆ ತಾ. 16 ರಂದು ಮಾಕುಟ್ಟ ಕ್ಷೇತ್ರದಿಂದ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರವನ್ನು ಬೇಟೋಳಿ ಗ್ರಾಮ ಪಂಚಾಯಿತಿ ಚುನಾವಣಾಧಿಕಾರಿಗೆ ಸಲ್ಲಿಸಿದ್ದರು.
ಇಂದು ಚುನಾವಣಾಧಿಕಾರಿಗಳು ನಾಮಪತ್ರ ಪರಿಶೀಲನೆ ಮಾಡಿದ್ದು, ನಂತರದಲ್ಲಿ ತಾಲೂಕು ದÀಂಡಾಧಿಕಾರಿಗಳ ಕಚೇರಿಯ ಸಿಬ್ಬಂದಿ ಮಾಕುಟ್ಟ ಗ್ರಾಮದ ಪರಿಸ್ಕøತ ಮತದಾರರ ಪಟ್ಟಿಯನ್ನು ಬೇಟೋಳಿ ಪಂಚಾಯಿತಿಗೆ ತಲುಪಿಸಿದ್ದಾರೆ.
ಆದರೆ ತಾಲೂಕು ಕಚೇರಿ ಸಿಬ್ಬಂದಿ ನೀಡಿರುವ ಮತದಾರರ ಪಟ್ಟಿಯಲ್ಲಿ ಕೆ.ಕೆ. ಉಮ್ಮರ್ ಅವರ ಹೆಸರು ಇಲ್ಲದಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ನಾಮ ಪತ್ರವನ್ನು ತಿರಸ್ಕರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭ್ಯರ್ಥಿ ಕೆ.ಕೆ. ಉಮ್ಮರ್, ನಾನು ಮಾಕುಟ್ಟ ಗ್ರಾಮದ ನಿವಾಸಿಯಾಗಿದ್ದು, 1974 ರಿಂದ 2020ರ ವರೆಗೆ ಕಂದಾಯ ಮತ್ತು ಇತರ ಕರಗಳನ್ನು ಚಾಚುತಪ್ಪದೆ ಪಂಚಾಯಿತಿಗೆ ಪಾವತಿ ಮಾಡಿರುತ್ತೇನೆ. ನಾನು ಹೊಂದಿರುವ ಆಧಾರ್ ಚೀಟಿ, ಪಡಿತರ ಚೀಟಿ ಬೇಟೋಳಿ ಪಂಚಾಯಿತಿಯ ವಿಳಾಸದಲ್ಲಿದೆ. ಅಲ್ಲದೆ 2005 ರಿಂದ ಸತತ ಮೂರು ಬಾರಿ ಮಾಕುಟ್ಟ ಭಾಗದಿಂದ ಚುನಾವಣೆಗೆ ಸ್ಪರ್ಧಿಸಿ ಗ್ರಾಮ ಪಂಚಾಯಿತಿಯ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ. ಇದೀಗ ಪ್ರಸ್ತುತ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ನೀಡಿದ್ದು ಅಧಿಕಾರಿ, ಸಿಬ್ಬಂದಿಗಳ ಅಚಾತುರ್ಯದಿಂದ ಮತದಾರರ ಪಟ್ಟಿಯಿಂದ ನನ್ನ ಹೆಸರು ಬಿಟ್ಟು ಹೋಗಿದೆ ಎಂದು ಅರೋಪಿಸಿದರು. ಅಲ್ಲದೆ ಇದನ್ನು ಪ್ರಶ್ನಿಸಿ ವಕೀಲರ ಮೂಲಕ ನ್ಯಾಯಾಲಯದ ಮೊರೆಹೊಗುತ್ತೇನೆ ಎಂದರು.