ಮಡಿಕೇರಿ, ಡಿ. 17: ಶ್ರೀಮಂಗಲ ನಾಡು ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್‍ನ ಮೂಲಕ ಇತ್ತೀಚೆಗೆ ಪುತ್ತರಿ ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳೊಂದಿಗೆ ಪುತ್ತರಿ ಊರೋರ್ಮೆಯನ್ನು ಆಚರಿಸಲಾಯಿತು.

ಸಮಾಜದ ಆವರಣದಲ್ಲಿ ವಿವಿಧ ಕ್ರೀಡಾ ಕಾರ್ಯಕ್ರಮಗಳು, ಕರಕುಶಲ ವಸ್ತುಗಳ ಪ್ರದರ್ಶನದಂತಹ ಕಾರ್ಯಕ್ರಮ ಜರುಗಿತು. ಕಳೆದ ಮಾರ್ಚ್‍ನಲ್ಲಿ ಕಟ್ಟೇರ ಸುಶೀಲಾ ಅಚ್ಚಪ್ಪ ಅವರ ಅಧ್ಯಕ್ಷತೆಯಲ್ಲಿ 20 ಸದಸ್ಯರೊಂದಿಗೆ ಆರಂಭಗೊಂಡ ಪರಿಷತ್ ಇದೀಗ ಸದಸ್ಯರ ಸಂಖ್ಯೆಯು ಹೆಚ್ಚಾಗಿದ್ದು, ಒಕ್ಕೂಟದ ವತಿಯಿಂದ ವಿವಿಧ ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನೂ ನಡೆಸಲಾಗುತ್ತಿದೆ.

ಈ ಸಂದರ್ಭ ಮಾತನಾಡಿದ ಪರಿಷತ್‍ನ ಉಪಾಧ್ಯಕ್ಷೆ ಬೊಜ್ಜಂಗಡ ಶೈಲಾ ಸುಬ್ರಮಣಿ ಅವರು ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿಯುವಂತೆ ಹೇಳಿದರು.

ವತಿಯಿಂದ ವಿವಿಧ ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನೂ ನಡೆಸಲಾಗುತ್ತಿದೆ.

ಈ ಸಂದರ್ಭ ಮಾತನಾಡಿದ ಪರಿಷತ್‍ನ ಉಪಾಧ್ಯಕ್ಷೆ ಬೊಜ್ಜಂಗಡ ಶೈಲಾ ಸುಬ್ರಮಣಿ ಅವರು ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿಯುವಂತೆ ಹೇಳಿದರು. ಜಂಟಿ ಕಾರ್ಯದರ್ಶಿ ಕಾಳಿಮಾಡ ಸೀಮಾ ಪ್ರಶಾಂತ್ ಮಾತನಾಡಿ ಸ್ವಾಗತಿಸಿದರು. ನಿರ್ದೇಶಕಿ ಮಚ್ಚಾಮಾಡ ನಂದಿತಾ ಕಾರ್ಯಪ್ಪ ಕ್ರೀಡಾ ಸ್ಪರ್ಧೆ ನಡೆಸಿಕೊಟ್ಟರು. ಊಟೋಪಚಾರ ಹಾಗೂ ವಾಲಗತಾಟ್‍ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.