ಗೋಣಿಕೊಪ್ಪ ವರದಿ, ಡಿ. 17 ; ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್ ಕಮಿಟಿ, ಹಾಕಿ ಕರ್ನಾಟಕ ಮತ್ತು ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್ನ ಗುರುವಾರದ ಪಂದ್ಯದಲ್ಲಿ ಗೋರ್ಸ್ ಪ್ರಗತಿ ಸ್ಪೋಟ್ರ್ಸ್ ಅಕಾಡೆಮಿ ಗೆಲುವಿನ ನಗೆ ಬೀರಿದವು.
ಪವಿನ್ ಪೊನ್ನಣ್ಣ ಫೌಂಡೇಷನ್ ಹಾಗೂ ಪ್ರಗತಿ ಸ್ಪೋಟ್ರ್ಸ್ ತಂಡಗಳ ನಡುವಿನ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಯಿತು.
ಗೋರ್ಸ್ ತಂಡವು ಜೀಯಣ್ಣ ವಿರುದ್ದ 3-0 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿತು. 10 ನೇ ನಿಮಿಷದಲ್ಲಿ ಚಿರಂತ್ ಮೇದಪ್ಪ, 48 ರಲ್ಲಿ ಆಭರಣ್ ಸುದೇವ್, 52 ರಲ್ಲಿ ತ್ರಿಷುಲ್ ಗಣಪತಿ, ಗೋಲು ಹೊಡೆದರು.
ಮಂದ ಬೆಳಕಿನಿಂದ ಗುರುವಾರಕ್ಕೆ ಮುಂದೂಡಲ್ಪಟ್ಟಿದ್ದ ಪ್ರಗತಿ ಸ್ಪೋಟ್ರ್ಸ್ ಅಕಾಡೆಮಿ ಮತ್ತು ಜಿಯಣ್ಣ ಗ್ರೂಪ್ ತಂಡಗಳ ನಡುವಿನ ಪಂದ್ಯದಲ್ಲಿ ಪ್ರಗತಿ 3-1 ಗೋಲುಗಳ ಅಂತರದಿಂದ ಪ್ರಗತಿ ಜಯಿಸಿತು. 59 ನೇ ನಿಮಿಷ ದಲ್ಲಿ ಪಿ. ಎಸ್. ನಿತಿನ್ ಬಾರಿಸಿದ ಗೋಲು ಗೆಲುವಿನ ಅಂತರ ಹೆಚ್ಚಿಸಿತು.
ಪ್ರಗತಿ ಸ್ಪೋಟ್ರ್ಸ್ ಹಾಗೂ ಪವಿನ್ ಪೊನ್ನಣ್ಣ ಫೌಂಡೇಷನ್ ತಂಡಗಳ ನಡುವಿನ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಯಿತು. 26 ನೇ ನಿಮಿಷದಲ್ಲಿ ಪವಿನ್ ತಂಡದ ಪಳಂಗಪ್ಪ, 52 ರಲ್ಲಿ ಬೆಳ್ಯಪ್ಪ, ಪ್ರಗತಿ ಪರ 48 ರಲ್ಲಿ ಲೇಖನ್, 56 ರಲ್ಲಿ ಸೋಮಣ್ಣ ತಲಾ ಒಂದೊಂದು ಗೋಲು ಹೊಡೆದರು.
ಮುಳಿಯ ಜ್ಯುವೆಲ್ಸ್ ಪಂದ್ಯ ಪುರುಷ ಬೆಳ್ಳಿ ನಾಣ್ಯವನ್ನು ಪ್ರಗತಿ ತಂಡದ ಯತೀಶ್, ಗೋರ್ಸ್ ತಂಡದ ಯಶ್ವಿನ್, ಪವಿನ್ ಪೊನ್ನಣ್ಣ ತಂಡದ ಪಟ್ಟಡ ಬೆಳ್ಯಪ್ಪ ಪಡೆದುಕೊಂಡರು. ಶನಿವಾರ ಪ್ಲೇ ಆಫ್, ಸೆಮಿ, ಭಾನುವಾರ ಫೈನಲ್ ಹಣಾಹಣಿ ನಡೆಯಲಿದೆ.