ಕಳೆದ ಸಾಲಿನಲ್ಲಿ ವಿಶೇಷಚೇತನರಿಗೆ ರೂ. ೧.೭೨ ಲಕ್ಷ ಸಹಾಯಧನ
ಮುಳ್ಳೂರು, ಫೆ. ೨೬: ಮುಂದಿನ ಸಾಲಿನಲ್ಲಿ ವಿಶೇಷಚೇತನರಿಗೆ ಸ್ವಂತ ಉದ್ಯೋಗ ಕಲ್ಪಿಸಲು ಅಂಗವಿಕಲರ ಪರಿಷತ್ ವತಿಯಿಂದ ಯೋಜನೆ ರೂಪಿಸಲಾಗಿದ್ದು, ಕೊಡಗು ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ವಿಶೇಷಚೇತನ ಫಲಾನುಭವಿಗಳಿಗೆ ಒಟ್ಟು ರೂ. ೧.೭೨ ಲಕ್ಷ ಸಹಾಯ ಧನದ ಚೆಕ್ ವಿತರಣೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಪರಿಷತ್ ಅಧ್ಯಕ್ಷ ಮತ್ತು ಪ್ರದೇಶ ಕಾಂಗ್ರೆಸ್ ಪಕ್ಷದ ಅಂಗವಿಕಲರ ವಿಭಾಗದ ರಾಜ್ಯಾಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.
ಶನಿವಾರಸಂತೆ ಪಟ್ಟಣದಲ್ಲಿರುವÀ ಅವರ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಕಳೆದ
ಸಾಲಿನಲ್ಲಿ ಶನಿವಾರಸಂತೆ ವಿಭಾಗದಲ್ಲಿ ಬುದ್ಧಿಮಾನ್ಯ ಮತ್ತು ಇತರ ವಿಶೇಷಚೇತನರಿಗೆ ರೂ. ೧.೭೨ ಲಕ್ಷ ಸಹಾಯ ಧನ ವಿತರಣೆ ಮಾಡಲಾಗಿದ್ದು
೨೦೧೯ರ ಸಾಲಿನಲ್ಲಿ ೨ ಲಕ್ಷ ರೂ.ಗಿಂತ ಹೆಚ್ಚಿನ ಸಹಾಯ ಧನ ವಿತರಣೆ ಮಾಡಲಾಗಿತ್ತು ಎಂದರು. ಅಂಗವಿಕಲರ ಪರಿಷತ್ ವತಿಯಿಂದ ಮುಂದಿನ ಸಾಲಿನಲ್ಲಿ ವಿಶೇಷಚೇತನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಯೋಜನೆ ರೂಪಿಸಲಾಗಿದ್ದು. ಈಗಾಗಲೆ ಸಂಸ್ಥೆ ವತಿಯಿಂದ ವಿಶೇಷಚೇತನರು ಮನೆ ಬಳಕೆ ಉಪಯುಕ್ತ ವಸ್ತುಗಳನ್ನು ತಯಾರಿಸಿದ ವಸ್ತುಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ಸಾಲಿನಲ್ಲಿ ಕೊಡಗು ಜಿಲ್ಲೆಯ ವಿಶೇಷಚೇತನರು ಅಡಿಕೆತಟ್ಟೆ ಮುಂತಾದ ಸ್ವಂತ ಉದ್ಯೋಗ ಮಾಡಲು ಬ್ಯಾಂಕಿನಿAದ ಸಾಲ ಸೌಲಭ್ಯ ಕೊಡಿಸುವುದು, ಯಂತ್ರೋಪಕರಣ ಪಡೆದುಕೊಳ್ಳಲು ಸವಲತ್ತುಗಳನ್ನು ಒದಗಿಸಿಕೊಡುವುದು ಮತ್ತು ಅವರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಲು ಸಹ ಸಂಸ್ಥೆ ಮುಂದೆ ಬರುತ್ತದೆ ಎಂದರು.
ನಮ್ಮ ಪರಿಷತ್‌ಗೆ ಮಾಹಿತಿ ನೀಡಿದರೆ ಪರಿಷತ್ ವತಿಯಿಂದ ಅಂತಹ ಫಲಾನುಭವಿಗಳಿಗೆ ಸೇವೆ ಸವಲತ್ತುಗಳನ್ನು ನೀಡುತ್ತದೆ ಎಂದು ಮನವಿ ಮಾಡಿದರು.