ಮಡಿಕೇರಿ, ಫೆ. ೨೬: ಬೆಂಗಳೂರು ವಿಶ್ವವಿದ್ಯಾಲಯದ ‘ಮಹಾರಾಣಿ ಲಕ್ಷಿö್ಮ ಅಮ್ಮಣ್ಣಿ’ ಕಾಲೇಜಿನಲ್ಲಿ ಕನ್ನಡ ಎಂಎ ಪದವಿ ಪಡೆದುಕೊಂಡಿರುವ ಮಡಿಕೇರಿ ತಾಲೂಕಿನ, ಹೆಬ್ಬೆಟ್ಟಗೇರಿಯ ಕೆ. ನಿಡುಗಡೆ ಅಂಚೆಯ ಲೀಲಾ ಜೋಸೆಫ್ ಎ.ಜೆ. ಹಾಗೂ ಎ.ಎಸ್. ಆ್ಯಂಟನಿ ಅವರ ಪುತ್ರಿ ಡಯಾನಾ ಆ್ಯಂಟನಿ ಅವರಿಗೆ ಕನ್ನಡ ಎಂ.ಎ. ಪದವಿಯಲ್ಲಿ ಸಾಧನೆ ಮಾಡಿದವರಿಗೆ ನೀಡುವ ‘ಡಾ. ಕೆ. ಪದ್ಮ ಆರ್. ರಾವ್’ ಸ್ಮರಣಾರ್ಥ ಚಿನ್ನದ ಪದಕ ಪ್ರಶಸ್ತಿ ಘೋಷಿಸಲಾಗಿದೆ