ಕುಶಾಲನಗರ, ಫೆ. ೨೫: ಕುಶಾಲನಗರದ ಮಾರ್ನಿಂಗ್ ಕ್ರಿಕೆರ‍್ಸ್ ಆಶ್ರಯದಲ್ಲಿ ೨ನೇ ವರ್ಷದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ತಾ. ೨೭ ರಿಂದ ಎರಡು ದಿನಗಳ ಕಾಲ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಹೆಚ್.ಆರ್. ವೆಂಕಟೇಶ್ ತಿಳಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸ್ಥಳೀಯ ಜಿಎಂಪಿ ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯ ನಡೆಯಲಿದೆ. ಪ್ರದರ್ಶನ ಪಂದ್ಯವಾಗಿ ಕುಶಾಲನಗರ ಪತ್ರಕರ್ತರು ಮತ್ತು ಪೊಲೀಸ್ ಇಲಾಖೆ ತಂಡಗಳ ನಡುವೆ ಪಂದ್ಯಾಟ ನಡೆಯಲಿದೆ ಎಂದು ತಿಳಿಸಿದರು. ಈಗಾಗಲೇ ೨೦ ತಂಡಗಳು ನೋಂದಾಯಿಸಿಕೊAಡಿದ್ದು ಇನ್ನೂ ೧೦ ತಂಡಗಳಿಗೆ ನೋಂದಾವಣೆಗೆ ಅವಕಾಶವಿದೆ. ನೋಂದಾಯಿಸಿಕೊಳ್ಳಲು ೯೮೮೦೫೫೦೨೫೩, ೯೯೦೧೫೧೭೦೯೭ ಸಂಪರ್ಕಿಸಲು ಅವರು ಕೋರಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಪ್ರದೀಪ್‌ಕುಮಾರ್, ಚಂದನ್, ಶಿವರಾಜ್, ರಿಜು ಬಸಪ್ಪ ಇದ್ದರು