ಮಡಿಕೇರಿ, ಫೆ. ೨೫: ೨೦೧೮ರಲ್ಲಿ ಕೊಡಗಿನಲ್ಲಿ ಸುರಿದ ಎಂದೆAದೂ ಕಾಣದ ಮಹಾಮಳೆ ಜಿಲ್ಲೆಯನ್ನು ನಲುಗುವಂತೆ ಮಾಡಿತ್ತು. ಭೀಕರ ದುರಂತಕ್ಕೆ ಸಾವು-ನೋವು ಸಂಭವಿಸಿ, ರೈತರÀ ಆದಾಯದ ಮೂಲವಾಗಿದ್ದ ಸಾವಿರಾರು ಹೆಕ್ಟೇರ್ ಕೃಷಿ, ತೋಟಗಾರಿಕೆ ಬೆಳೆಗಳು ಮಳೆಗೆ ನೆಲಕಚ್ಚಿದ್ದವು. ಮನೆ, ರಸ್ತೆ, ಸೇತುವೆ ಸೇರಿದಂತೆ ಮೂಲಭೂತ ವ್ಯವಸ್ಥೆಗಳು ಹಾನಿಗೊಳಗಾದವು. ಹಲವರ ಜೀವವನ್ನು ಪ್ರಕೃತಿ ಬಲಿಪಡೆದು ಕೊಂಡಿತ್ತು. ಅಂದಿನ ಸಮ್ಮಿಶ್ರ ಸರ್ಕಾರ ಹೆಚ್.ಜೆ. ರಾಕೇಶ್ ಮಡಿಕೇರಿ, ಫೆ. ೨೫: ೨೦೧೮ರಲ್ಲಿ ಕೊಡಗಿನಲ್ಲಿ ಸುರಿದ ಎಂದೆAದೂ ಕಾಣದ ಮಹಾಮಳೆ ಜಿಲ್ಲೆಯನ್ನು ನಲುಗುವಂತೆ ಮಾಡಿತ್ತು. ಭೀಕರ ದುರಂತಕ್ಕೆ ಸಾವು-ನೋವು ಸಂಭವಿಸಿ, ರೈತರÀ ಆದಾಯದ ಮೂಲವಾಗಿದ್ದ ಸಾವಿರಾರು ಹೆಕ್ಟೇರ್ ಕೃಷಿ, ತೋಟಗಾರಿಕೆ ಬೆಳೆಗಳು ಮಳೆಗೆ ನೆಲಕಚ್ಚಿದ್ದವು. ಮನೆ, ರಸ್ತೆ, ಸೇತುವೆ ಸೇರಿದಂತೆ ಮೂಲಭೂತ ವ್ಯವಸ್ಥೆಗಳು ಹಾನಿಗೊಳಗಾದವು. ಹಲವರ ಜೀವವನ್ನು ಪ್ರಕೃತಿ ಬಲಿಪಡೆದು ಕೊಂಡಿತ್ತು. ಅಂದಿನ ಸಮ್ಮಿಶ್ರ ಸರ್ಕಾರ ಘೋಷಣೆ ಮಾಡಿದ ಕೊಡಗು ಅಭಿವೃದ್ಧಿ ಮತ್ತು ಪುನರ್ ನಿರ್ಮಾಣ ಪ್ರಾಧಿಕಾರ ನಾಮಕಾವಸ್ಥೆಗೆ ಮಾತ್ರ ಸೀಮಿತವಾಗಿದೆ. ಕಳೆದ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪ ಕೊಡಗು ಜಿಲ್ಲೆಯ ಜ್ವಲಂತ ಸಮಸ್ಯೆಯ ಪಟ್ಟಿಗೆ ಸೇರಿ ಹೋಗಿದೆ. ಮಳೆಗಾಲ ಬಂತೆAದರೆ ಇಲ್ಲಿನ ಜನರಲ್ಲಿ ಭಯ ಕಾಡುತ್ತದೆ. ನದಿ, ಅರಣ್ಯ, ಬೆಟ್ಟ-ಗುಡ್ಡದಂಚಿನ ಜನರಂತೂ ಮಳೆಗಾಲದಲ್ಲಿ ಗ್ರಾಮವನ್ನು ಬಿಟ್ಟು ಜೀವ ಭಯದಿಂದ ಬೇರೆಡೆಗೆ ಸ್ಥಳಾಂತರಗೊಳ್ಳುತ್ತಾರೆ. ಇಂದಿಗೂ ನೆರೆಯಿಂದ ಉಂಟಾದ ಸಮಸ್ಯೆಗಳು ಪರಿಹಾರ ಕಂಡಿಲ್ಲ. ಸರ್ಕಾರದಿಂದ ಸಮರ್ಪಕ ನೆರವು ದೊರೆತ್ತಿಲ್ಲ. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಸರ್ಕಾರ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಇದರೊಂದಿಗೆ ಕೊಡಗು ಅಭಿವೃದ್ಧಿ ಮತ್ತು ಪುನರ್ ನಿರ್ಮಾಣ ಪ್ರಾಧಿಕಾರ ಕಾರ್ಯಚಟುವಟಿಕೆ ಆರಂಭಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರಾಸಕ್ತಿ ತೋರಿದ್ದಾರೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಘೋಷಣೆ ಯಾದ ಯೋಜನೆ ಕಾರ್ಯಗತ ಮಾಡಲು ಸಂಬAಧಿಸಿದವರು ಮೀನಾ ಮೇಷ ಎಣಿಸಲು ಕಾರಣವೇನೆಂದು ಪ್ರಶ್ನೆಯಾಗಿಯೇ ಉಳಿದಿದೆ.

೨೦೧೮ರಲ್ಲಿ ಘೋಷಣೆ :

೨೦೧೮ ಅಕ್ಟೋಬರ್ ೧೭ ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ನೆರೆ ಸಂತ್ರಸ್ತರೊAದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೊಡಗು ಅಭಿವೃದ್ಧಿ ಮತ್ತು ಪುನರ್ ನಿರ್ಮಾಣ ಪ್ರಾಧಿಕಾರವನ್ನು ಅಂದಿನ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದರು.

(ಮೊದಲ ಪುಟದಿಂದ) ಈ ಮೂಲಕ ನೆರೆ ಸಂತ್ರಸ್ತರ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಇದಕ್ಕೆ ಸೂಕ್ತ ಅನುದಾನ, ಕಾರ್ಯಚಟುವಟಿಕೆಯ ಮಾರ್ಗಸೂಚಿಯನ್ನು ಹೊರಡಿಸುವುದಾಗಿ ಹೇಳಿದ್ದರು. ಇನ್ನೂ ೭ ದಿನದೊಳಗೆ ಪ್ರಾಧಿಕಾರ ರಚಿಸಿ, ಸೂಕ್ತ ಅನುದಾನ ನೀಡುವುದಾಗಿ ಕೊಡಗಿನ ಜನರಿಗೆ ಆಶ್ವಾಸನೆ ನೀಡಿದ್ದರು. ಆದರೆ, ಪ್ರಾಧಿಕಾರ ಕಾರ್ಯಚಟುವಟಿಕೆ ಇಂದಿಗೂ ಆರಂಭಗೊAಡಿಲ್ಲ. ಪ್ರಾಧಿಕಾರ ಹೆಸರಿಗಷ್ಟೇ ಇದೆ. ಯಾವುದೇ ಯೋಜನೆ ಕಾರ್ಯಗತವಾಗುತ್ತಿಲ್ಲ. ಅಂದಿನ ಸರ್ಕಾರವನ್ನು ದೂರುತ್ತಿದ್ದ ಶಾಸಕರು ಇಂದು ಮೌನವಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಕೇವಲ ಒಂದು ಬಾರಿ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಾಧಿಕಾರದ ಬಗ್ಗೆ ಮಾತನಾಡಿದ್ದರು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಕ್ರಿಯೆಗಳು ಕೂಡ ಆರಂಭಗೊAಡಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ದಿವ್ಯ ನಿರ್ಲಕ್ಷö್ಯ ವಹಿಸಿದ್ದು, ಅಧಿಕಾರಿಗಳ ನಿರಾಸಕ್ತಿ ಎದ್ದು ಕಾಣುತ್ತಿದೆ. ಪ್ರಾಧಿಕಾರ ಘೋಷಣೆಯಾಗಿ ಎರಡೂವರೆ ವರ್ಷ ಕಳೆದರೂ ಇಂದಿಗೂ ಪ್ರಾಧಿಕಾರದ ಮೂಲ ಉದ್ದೇಶ ಈಡೇರದೆ ನಿಂತ ನೀರಾಗಿದೆ.

ನಾಮಕಾವಸ್ಥೆ ಪ್ರಾಧಿಕಾರ : ಕೇವಲ ನೆರೆ ಸಮಸ್ಯೆಗಲ್ಲದೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸೃಷ್ಟಿಯಾದ ಪ್ರಾಧಿಕಾರ ನಾಮಕಾವಸ್ಥೆಗೆ ಮಾತ್ರ ಇರುವುದು ಬೇಸರಕ್ಕೆ ಕಾರಣವಾಗಿದೆ. ಸ್ವತಃ ಮುಖ್ಯಮಂತ್ರಿಯೇ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಕಂದಾಯ, ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಉಳಿದಂತೆ ಸದಸ್ಯರಾಗಿ ವಸತಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು, ಕೊಡಗು-ಮೈಸೂರು ಸಂಸದ, ಕೊಡಗು ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿ.ಪಂ. ಅಧ್ಯಕ್ಷ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಾ ಹಣಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಇಂಜಿನಿಯರ್, ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್, ಚೆಸ್ಕಾಂ ಅಧೀಕ್ಷಕ, ತೋಟಗಾರಿಕಾ ಇಲಾಖೆ ನಿರ್ದೇಶಕ, ಕಾಫಿ ಮಂಡಳಿ ವ್ಯವಸ್ಥಾಪಕರು ಕಾರ್ಯನಿರ್ವಹಿಸಬೇಕಾಗಿದೆ. ಇವರೊಂದಿಗೆ ಕೆ.ಎ.ಎಸ್. ಹಿರಿಯ ಶ್ರೇಣಿ ಅಧಿಕಾರಿಯ ವಿಶೇಷ ತಜ್ಞರನ್ನು ನೇಮಕ ಮಾಡಬೇಕಾಗಿದ್ದು, ಇವೆಲ್ಲ ಪ್ರಕ್ರಿಯೆಗಳು ನಡೆಯದೆ ಪ್ರಾಧಿಕಾರ ನಿದ್ರಾವಸ್ಥೆಯಲ್ಲಿದೆ.

ಪ್ರಾಧಿಕಾರಕ್ಕೆ ಸಂಬAಧಪಟ್ಟ ಅಧಿಕಾರಿಗಳ, ಅಗತ್ಯ ಸಿಬ್ಬಂದಿಗಳ ವೇತನ, ಕಚೇರಿ ವೆಚ್ಚ, ಇತರ ವೆಚ್ಚ ಸೇರಿದಂತೆ ಇನ್ನಿತರ ವೆಚ್ಚಗಳಿಗೆ ಒಟ್ಟು ರೂ ೧೫,೧೭ ಕೋಟಿ ಅವಶ್ಯಕತೆ ಇದೆ. ಇದನ್ನು ೨೦೧೯-೨೦ನೇ ಸಾಲಿನ ಬಜೆಟ್‌ನಲ್ಲಿ ಮೀಸಲಿಡಬೇಕೆಂದು ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿತ್ತು.