ವೀರಾಜಪೇಟೆ, ಫೆ. ೨೬: ಸಮೀಪದ ಕದನೂರಿನ ಶ್ರೀ ಭಗವತಿ ದೇವರ ವಾರ್ಷಿಕ ತಾ. ೨೮ ರಿಂದ ಮಾರ್ಚ್ ೨ರವರೆಗೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಅಮ್ಮುಣಿಚಂಡ ರವಿ ಉತ್ತಪ್ಪ ತಿಳಿಸಿದ್ದಾರೆ. ತಾ. ೨೮ರಂದು ಅಂದಿ ಬೊಳಕ್, ಮಾರ್ಚ್ ೧ರಂದು ದೇವರು ಬನಕ್ಕೆ ಹೋಗುವುದು ಮತ್ತು ಅಯ್ಯಪ್ಪತೆರೆ. ಮಾರ್ಚ್ ೨ರಂದು ೪.೩೦ ಗಂಟೆಗೆ ಎತ್ತ್ ಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು ಮತ್ತು ದೇವರು ಜಳಕ ಹೋಗುವುದು. ಸಂಜೆ ೭:೩೦ ಗಂಟೆಗೆ ಜಳಕ ಮುಗಿಸಿ ದೇವಾಲಯಕ್ಕೆ ಬರುವ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.