ಮಡಿಕೇರಿ, ಫೆ. ೨೫: ದಕ್ಷಿಣ ಕೊಡಗಿನಲ್ಲಿ ಆತಂಕ ಸೃಷ್ಟಿಸಿರುವ ಹುಲಿ ಸೆರೆ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ ಬೆಳ್ಳೂರು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಸಲಾಗಿರುವ ಕ್ಯಾಮರಾದಲ್ಲಿ ಕಳೆದ ರಾತ್ರಿ ಹುಲಿಯ ಚಿತ್ರ ಪತ್ತೆಯಾಗಿದೆ. ಅಲ್ಲಿನ ಬಾಚರಣಿಯಂಡ ರಘು ನಂಜಪ್ಪ ಅವರ ಹಸುವನ್ನು ಹುಲಿ ಕೊಂದು ಹಾಕಿದ್ದ ಸ್ಥಳದ ಸನಿಹದಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಹುಲಿಯ ಚಿತ್ರ ಗೋಚರಿಸಿದೆ. ಇದು ಸುಮಾರು ೧೨ ವರ್ಷ ಪ್ರಾಯದ ಭಾರೀ ಗಾತ್ರದ ಹುಲಿ ಎಂದು ಅಂದಾಜಿಸಲಾಗಿದೆ