ಗೋಣಿಕೊಪ್ಪ ವರದಿ, ಫೆ. ೨೬ ; ಅಸ್ಸಾಂನ ಗುವಾಹಟಿಯ ಇಂದಿರಾಗಾAಧಿ ಸ್ಟೇಡಿಯಂನಲ್ಲಿ ೨೦೨೧ನೇ ಸಾಲಿನ ೩೬ನೇ ರಾಷ್ಟಿçÃಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಡೆಯಿತು. ಈ ಕ್ರೀಡಾಕೂಟದಲ್ಲಿ ದ. ಕೊಡಗಿನ ಗೋಣಿಕೊಪ್ಪಲಿನ ಅಶ್ವಿನಿ ಸ್ಪೋರ್ಟ್ಟ್ ಫೌಂಡೇಶನ್‌ನಲ್ಲಿ ತರಬೇತಿ ಪಡೆಯುತ್ತಿರುವ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ಪದವಿ ವಿದ್ಯಾರ್ಥಿನಿ ಜ್ಯೋತಿಕಾ ೨೦ರ ವಯೋಮಿತಿಯ ಮಹಿಳಾ ವಿಭಾಗದ ೪೦೦ ಮೀಟರ್ ಓಟದಲ್ಲಿ ರಾಷ್ಟçಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡಿದ್ದಾರೆ.