ಕುಶಾಲನಗರ, ಫೆ. ೨೫: ಹೊಸಕೋಟೆ ಬಳಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಪ್ರಕರಣ ಪತ್ತೆಯಾಗಿದೆ. ಈ ಸಂಬAಧ ಹೊಸಕೋಟೆ ನಿವಾಸಿ ಮುಸ್ತಫ ಎಂಬಾತ ಬಂಧಿತನಾಗಿದ್ದು ಆರೋಪಿಯಿಂದ ೬೦ ಲಾಟರಿ ಟಿಕೆಟ್‌ಗಳು ಮತ್ತು ರೂ. ೭,೨೦೦ ನಗದು ವಶಪಡಿಸಿಕೊಳ್ಳಲಾಗಿದೆ. ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕುಶಾಲನಗರ ಅಪರಾಧ ಪತ್ತೆ ವಿಭಾಗದ ದಯಾನಂದ್, ಪ್ರಕಾಶ್, ಸಜಿ, ಸಂಪತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.