ಮಡಿಕೇರಿ, ಫೆ. ೨೬: ಇತ್ತೀಚೆಗೆ ನಡೆದ ಅಂತರರಾಷ್ಟಿçÃಯ ‘ಬ್ರೆöÊನ್ ಒ ಬ್ರೆöÊನ್ ಅಬಾಕಸ್’ ಆನ್‌ಲೈನ್ ಸ್ಪರ್ಧೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಚಾಂಪಿಯನ್ ಪ್ರಶಸ್ತಿ, ಚಿನ್ನದ ಪದಕ ಹಾಗೂ ಬೆಳ್ಳಿ ಪದಕಗಳನ್ನು ಪಡೆದುಕೊಂಡರು. ೪೫ ದೇಶಗಳಿಂದ ಒಟ್ಟು ೨೫,೦೦೦ ವಿದ್ಯಾರ್ಥಿಗಳು ಭಾಗವಹಿಸಿದ ಈ ಸ್ಪರ್ಧೆಯಲ್ಲಿ ಮಡಿಕೇರಿ ಅಬಾಕಸ್ ಸೆಂಟರ್‌ನ ಮುಖ್ಯಸ್ಥೆ ಮಾಪಂಗಡ ಕವಿತಾ ಕರುಂಬಯ್ಯ ಅವರ ಮಾರ್ಗದರ್ಶನದಲ್ಲಿ ಒಟ್ಟು ೨೯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಪೈಕಿ ೨ ಚಾಂಪಿಯನ್ ಪ್ರಶಸ್ತಿ, ೪ ಚಿನ್ನದ ಪದಕ ಹಾಗೂ ೨೧ ಬೆಳ್ಳಿಯ ಪದಕಗಳನ್ನು ಮಡಿಕೇರಿಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಚಾಂಪಿಯನ್ ಪ್ರಶಸ್ತಿಗಳನ್ನು ಜನರಲ್ ತಿಮ್ಮಯ್ಯ ಶಾಲೆಯ ಲಿಕಿತ್ ಜಿ.ವಿ ಹಾಗೂ ಸಂತ ಜೋಸೆಫರ ಶಾಲೆಯ ತನ್ಮಯ್ ಎಮ್.ಎನ್ ಅವರುಗಳು ಪಡೆದುಕೊಂಡರು. ಚಿನ್ನದ ಪದಕಗಳನ್ನು ಸಂತ ಜೋಸೆಫರ ಶಾಲೆಯ ಅನ್ಶಿಯ ಡಿ’ಕ್ರೂಸ್ ಹಾಗೂ ಇಂಚರಾ ಕೆ.ವಿ, ಶಾಂತಿನಿಕೇತನ ಶಾಲೆಯ ಗೌರವ ಎಮ್.ಸಿ ಹಾಗೂ ಕೇಂದ್ರೀಯ ವಿದ್ಯಾಲಯ ಶಾಲೆಯ ತೇಜಸ್ ಶೆಟ್ಟಿ ಅವರುಗಳು ಪಡೆದುಕೊಂಡಿದ್ದಾರೆ.