ನಾಪೋಕ್ಲು, ಫೆ. ೨೫: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಸೂಫಿ ಶಹೀದ್ ವಲಿಯುಲ್ಲ್ಲಾರವರ ವಾರ್ಷಿಕ ಉರೂಸ್ ತಾ. ೨೬ ರಿಂದ (ಇಂದಿನಿAದ) ಮಾ. ೫ ರವರೆಗೆ ನಡೆಯಲಿದೆ.ಮಾ. ೧ ರಂದು ಸರ್ವಧರ್ಮ ಸಮ್ಮೇಳನದೊಂದಿಗೆ ಅನ್ನದಾನ ಕೂಡ ನಡೆಯಲಿದೆ. ಈ ಸಮಾರಂಭಕ್ಕೆ ರಾಜ್ಯ, ಅಂತರರಾಜ್ಯ ಹಾಗೂ ವಿದೇಶದ ಕೊಲ್ಲಿ ರಾಷ್ಟçಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಯಾತ್ರಾರ್ಥಿಗಳು ಬಂದು ಸೇರುತ್ತಾರೆ. ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಎಮ್ಮೆಮಾಡು ಉರೂಸ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ನಿರ್ಬಂಧಿಸಿ ಜಿಲ್ಲಾಡಳಿತ ಇಂದು ಸಂಜೆ ಆದೇಶ ಹೊರಡಿಸಿದೆ.ಇತಿಹಾಸ: ಸಾವಿರಾರು ವರ್ಷಗಳ ಹಿಂದೆ ಹಝರತ್ತ್ ಸೂಫಿ ಶಹೀದ್ ವಲಿಯುಲ್ಲಾರವರು ಎಮ್ಮೆಮಾಡು ಸಮೀಪದ ಬರಕೊಲ್ಲಿ ಎಂಬ ಸ್ಥಳದಲ್ಲಿ ಸಾವಿನಂಚಿನಲ್ಲಿದ್ದ ಸಂದರ್ಭ ಎಮ್ಮೆಮಾಡು ಗ್ರಾಮದ ಮಣವಟ್ಟಿರ ಕೊಡವ ಕುಟುಂಬಕ್ಕೆ ಸೇರಿದ ಹಸುವೊಂದು ಕಟ್ಟಿದ ಹಗ್ಗವನ್ನು ತಾನಾಗಿಯೇ ತುಂಡರಿಸಿ ಬಂದು ಈ ಮಹಾಪುರುಷನಿಗೆ

(ಮೊದಲ ಪುಟದಿಂದ) ಹಾಲುಣಿಸಿತ್ತೆಂದು ಇತಿಹಾಸವಿದೆ. ಅದರ ಕುರುಹು ಎಂಬAತೆ ಇಂದಿಗೂ ಕಲ್ಲು ಬಂಡೆಯ ಮೇಲೆ ಹಸುವಿನ ಹಗ್ಗದ ಗುರುತು ಹಾಗೂ ಹಸುವಿನ ಗೊರಸಿನ ಗುರುತನ್ನು ಸಹ ಕಾಣಬಹುದಾಗಿದೆ.

ಈ ಪ್ರಸಂಗಕ್ಕೆ ಸಾಕ್ಷಿ ಎಂಬAತೆ ಜಾನುವಾರುಗಳ ರೋಗಕ್ಕೆ ಇಲ್ಲಿ ಪ್ರಾರ್ಥಿಸಿದರೆ ಶೀಘ್ರ ಪರಿಹಾರ ದೊರೆಯುವದು ಎನ್ನುವ ನಂಬಿಕೆ ಜನರಲ್ಲಿದೆ. ಇದಕ್ಕೆ ಪೂರಕ ಎಂಬAತೆ ಇಡೀ ಎಮ್ಮೆಮಾಡು ಗ್ರಾಮದಲ್ಲಿ ಗೋಹತ್ಯೆ ನಿಷೇಧಿಸಲಾಗಿದೆ. ಗೋಹತ್ಯೆ ಮಾಡಿದವರಿಗೆ ಮಾರಕ ರೋಗ ಬರುತ್ತದೆ ಎಂಬ ನಂಬಿಕೆಯೂ ಇಲ್ಲಿದೆ.

ಸೂಫಿ ಶಹಿದ್ ದರ್ಗಾ ಶರೀಫ್ ದರ್ಶನಕ್ಕೆಂದು ಆಗಮಿಸಿದ ಅದೂರಿನ ಸಯ್ಯದ್ ಹಸನ್ ಸಖಾಫ್ ಆಲ್‌ಹಳ್‌ರಮಿ ತಂಙಳ್ ಮಹಮ್ಮದ್ ಪೈಗಂಬರರ ವಂಶಸ್ಥರಾಗಿದ್ದು, ನನಗೆ ನಿಮ್ಮೊಂದಿಗೆ ಅಂತಿಮ ವಿಶ್ರಾಂತಿಗೆ ಅನುವು ಮಾಡಿಕೊಡಬೇಕೆಂದು ಸೂಫಿ ಶಹೀದ್ ಅವರನ್ನು ಕೋರಿಕೊಂಡರAತೆ. ಇವರ ಕೋರಿಕೆಯನ್ನು ಸ್ವೀಕರಿಸಿದ ಸೂಫಿ ಶಹೀದ್ ಇವರಿಗೆ ತನಗಿಂತಲೂ ಎತ್ತರದ ಸ್ಥಾನ ನೀಡಿ ಗೌರವಿಸಿರುವದಕ್ಕೆ ದರ್ಗಾ ಶರೀಫ್ ಮೆಟ್ಟಲಿಳಿದು ಸಾಗುವ ಬಲಭಾಗದಲ್ಲಿ ಕಂಡುಬರುವ ಕಟ್ಟಡವೇ ಸಾಕ್ಷಿಯಾಗಿದೆ.

ವಿಶೇಷತೆ: ಹಿಂದೂ ಮುಸ್ಲಿಂ ಭಾವೈಕ್ಯತೆಯೇ ಈ ಉರೂಸ್‌ನ ವಿಶೇಷತೆ. ಇಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಸಂಭ್ರಮದಿAದ ಉರೂಸ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಹಿಂದೆ ಇಲ್ಲಿ ನಡೆಯುವ ಉರೂಸ್‌ಗೆ ಮಣವಟ್ಟಿರ ಕುಟುಂಬಸ್ಥರು ಚಾಲನೆ ನೀಡಿ, ಈ ಸಂಭ್ರಮಕ್ಕೆ ಮೆರಗು ನೀಡುತ್ತಿದ್ದರು.

ಶ್ರೀಮಂತ ದರ್ಗಾ ಎಂಬ ಖ್ಯಾತಿ: ಎಮ್ಮೆಮಾಡು ದರ್ಗಾವು ಶ್ರೀಮಂತ ದರ್ಗಾವೆಂದೇ ಖ್ಯಾತಿಗಳಿಸಿದೆ. ಇಲ್ಲಿಗೆ ಭೇಟಿ ನೀಡುವ ಲಕ್ಷಾಂತರ ಜನರೊಂದಿಗೆ ಹಣದ ಮಹಾಪೂರವೇ ಇಲ್ಲಿಗೆ ಹರಿದು ಬರುತ್ತಿದೆ. ಇಲ್ಲಿನ ದರ್ಗಾದ ಹಾಗೂ ಜಮಾಅತ್‌ನ ಆಡಳಿತವನ್ನು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಹಾಗೂ ಸರಕಾರದ ವಕ್ಫ್ ಬೋರ್ಡ್ನ ಜಂಟಿ ಸಹಯೋಗದೊಂದಿಗೆ ನಡೆಸಲಾಗುತ್ತಿದೆ. ಇಲ್ಲಿ ಸಂಗ್ರಹವಾಗುವ ಹಣದಿಂದ ಭಕ್ತಾದಿಗಳ ಅನುಕೂಲಕ್ಕಾಗಿ ಮೂಲ ಸೌಕರ್ಯಗಳನ್ನು ಒದಗಿಸುವದ ರೊಂದಿಗೆ, ಬಡಮಕ್ಕಳ ಅನಾಥಾಲಯ ಹಾಗೂ ಧಾರ್ಮಿಕ ವಿದ್ಯಾಭ್ಯಾಸ ನೀಡಲಾಗುತ್ತಿದೆ.

-ಪಿ.ವಿ. ಪ್ರಭಾಕರ್