ನಾಪೋಕ್ಲು, ಫೆ. ೨೬: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್‌ಗೆ ಕೋಯಿಕೋಡ್‌ನ ಸಯ್ಯಿದ್ ಮುಹಮ್ಮದ್ ಕೊಯ ತಂಙಳ್ ಜಮಲುಲ್ಲೆöÊಲಿ ಧ್ವಜಾರೋಹಣ ನೆರವೇರಿಸುವದರ ಮೂಲಕ ಚಾಲನೆ ನೀಡಿದರು.

ಅದಕ್ಕೂ ಮೊದಲು ಶುಕ್ರವಾರದ ಪ್ರಾರ್ಥನೆ, ಸೂಫಿ ಸಯ್ಯಿದ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಮ್ಮೆಮಾಡು ತಾಜುಲ್ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಕಾರ್ಯದರ್ಶಿ ಇಬ್ರಾಹಿಂ ಸಹದಿ, ನಿರ್ದೇಶಕರಾದ ಕೆ.ಎಂ ಹುಸೈನ್ ಶಖಾಫಿ, ಕಾಳೇರ ಅಬ್ದುಲ್ ಖಾದರ್, ಮಾಹಿನ್ ಸಿ.ಎಂ. ಆಶ್ರಫ್ ಸೇರಿದಂತೆ ಭಕ್ತಾದಿಗಳು, ಗ್ರಾಮಸ್ಥರು ಇದ್ದರು.