ಸುಂಟಿಕೊಪ್ಪ,ಫೆ.೨೬: ಸುಂಟಿಕೊಪ್ಪ ನಾಡ ಕಚೇರಿ ಶಿಥಿಲಾವಸ್ಥೆ ಯಲ್ಲಿದ್ದು ಜಿಲ್ಲಾಧಿಕಾರಿ ನಿಧಿಯಿಂದ ಕಟ್ಟಡ ನವೀಕರಣ ಕಾಮಗಾರಿ ನಡೆಯುತ್ತಿದ್ದು ಅವೈಜ್ಞಾನಿಕವಾದ ಕಾಮಗಾರಿಯಿಂದ ಮಳೆಗಾಲದಲ್ಲಿ ಕಚೇರಿಗೆ ಗಂಡಾAತರ ಕಾದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬ್ರಿಟಿಷರ ಕಾಲದ ನಾಡ ಕಚೇರಿ ಶಿಥಿಲಾವಸ್ಥೆಯಲಿದ್ದು, ಮಳೆಗಾಲದಲ್ಲಿ ಮಳಿಗೆ ಸೋರತ್ತದೆ. ಕಂಪ್ಯೂಟರ್‌ಗಳು ಸ್ಥಬ್ಧಗೊಂಡಿರುತ್ತದೆ. ಜಿಲ್ಲಾಧಿಕಾರಿಗಳಿಗೆ ಇಲ್ಲಿನ ಉಪತಹಶೀಲ್ದಾರ್ ಶುಭ, ಕಂದಾಯ ಪರಿವೀಕ್ಷಕ ಶಿವಪ್ಪ ಅವರು ಮನವಿ ಸಲ್ಲಿಸಿದ ಮೇರೆ ನಾಡ ಕಚೇರಿ ನವೀಕರಣಕ್ಕೆ ರೂ. ೫ ಲಕ್ಷ ಬಿಡುಗಡೆಗೊಳಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ನಡೆಯುತ್ತಿದ್ದು, ಕಚೇರಿಯ ೨ ಕೋಣೆಗಳಿಗೆ ಟೈಲ್ಸ್ ಅಳವಡಿಸಿ, ಸುಣ್ಣ ಬಣ್ಣ ಬಳಿದು ಜನರ ಉಪಯೋಗಕ್ಕಾಗಿ ಹೊರಾಂಗಣದ ಚಾವಣಿ ಅಳವಡಿಸಲಾಗಿದೆ. ಇದು ತೀರಾ ಕೆಳಭಾಗದಲ್ಲಿದ್ದು ಜನರು ನಿಲ್ಲಲು ಸಾಧ್ಯವಾಗುವುದಿಲ್ಲ, ಮೇಲ್ಚಾವಣಿ ಪಂಪ್ ಹೌಸ್ ಭಾಗಕ್ಕೆ ಸಂಪರ್ಕ ಕಲ್ಪಿಸುವ ಈ ಭಾಗದಿಂದ ವಾಹನಗಳಲ್ಲಿ ಸಂಚರಿಸುವವರು ಕೊಂಚ ಮೈಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ. ಟೈಲ್ಸ್ಗೆ ಸುಣ್ಣ ಬಳಿದಿದ್ದು ಕಟ್ಟಡ ಮೇಲ್ಚಾವಣಿಗೆ ಯಾವುದೇ ಕಾಮಗಾರಿ ನಡೆಯದೆ ಇರುವುದರಿಂದ ಮಳೆಗಾಲದಲ್ಲಿ ಕಚೇರಿ ಕಡತಗಳು ಕಂಪ್ಯೂಟರ್ ಜೋಪಾನವಾಗಿ ಇಡಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾ.ಪಂ.ಸದಸ್ಯ ಪಿ.ಆರ್.ಸುನಿಲ್‌ಕುಮಾರ್ ತಿಳಿಸಿದ್ದಾರೆ.