ವೀರಾಜಪೇಟೆ, ಫೆ. ೨೫: ಟೀಮ್ ಡ್ಯೂಡ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಐದನೆ ವರ್ಷದ ಕಬಡ್ಡಿ ಪ್ರೀಮಿಯರ್ ಲೀಗ್‌ನ ಪಂದ್ಯಾಟದಲ್ಲಿ ಬ್ಲಾö್ಯಕ್ ಪ್ಯಾಂರ‍್ಸ್ ತಂಡವು ಪ್ರಥಮ ಸ್ಥಾನ ಪಡೆಯಿತು.

ವೀರಾಜಪೇಟೆ ನಗರದ ಟೀಮ್ ಡ್ಯೂಡ್ಸ್ ಸಂಸ್ಥೆಯ ವತಿಯಿಂದ ನಗರದ ತಾಲೂಕು ಮೈದಾನದಲ್ಲಿ ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಾಟ ಆಯೋಜಿಸಲಾಗಿತ್ತು. ಪಂದ್ಯಾಟದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಸದಸ್ಯ ಮೊಹಮ್ಮದ್ ರಾಫಿ ಅವರು, ದೇಶಿಯ ಕ್ರೀಡೆಯಾದ ಕಬಡ್ಡಿ ಕ್ರೀಡೆಯು ಗ್ರಾಮೀಣ ಭಾಗದ ಜನತೆಯ ನಾಡಿಮಿಡಿತದಂತೆ. ದೇಶಿಯ ಕ್ರೀಡೆ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಕಬಡ್ಡಿಯನ್ನು ಜೀವಂತವಾಗಿರಿಸಲು ಸಂಸ್ಥೆಗಳು ಮುಂದಾಗಬೇಕು. ಕ್ರೀಡೆಗಳನ್ನು ಆಯೋಜಿಸುವ ಸಂಸ್ಥೆಗಳಿಗೆ ಸಾರ್ವಜನಿಕರು ಪ್ರೋತ್ಸಾಹ ನೀಡುವಂತಾದಲ್ಲಿ ಉತ್ತಮ ಕ್ರೀಡಾಪಟುಗಳ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ಉದ್ಯಮಿ ಅಂಜಪರವAಡ ಅನಿಲ್ ಮಂದಣ್ಣ ಮಾತನಾಡಿ, ಪ್ರಸ್ತುತ ದೇಶಿಯ ಕ್ರೀಡೆಗಳು ಕಣ್ಮರೆಯಾಗುತ್ತಿದೆ. ಯುವ ಮಿತ್ರರು ಮೊಬೈಲ್ ಮೋಹಕ್ಕೆ ಬಲಿಯಾಗಿದ್ದಾರೆ. ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸುವಿಕೆಯಿಂದ ದೇಹದ ಸ್ಥಿತಿಯು ಸಮತೋಲನದಲ್ಲಿರುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡೆಗಳನ್ನು ಬೆಳೆಸಿ ಎಂದು ಹೇಳಿದರು.

ವೇದಿಕೆಯಲ್ಲಿ ಬೆಂಗಳೂರಿನ ಕ್ರಾಂತಿ ಯುವ ಶಕ್ತಿ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜ್, ಉದ್ಯಮಿಗಳಾದ ಪ್ರತಾಪ್, ಮೋಹಿನ್, ಪುಚ್ಚಿಮಂಡ ನೀರಜ್, ಕ್ರೀಡಾಪಟುಗಳಾದ ಅಭಿನವ್ ಮತ್ತು ನಿತಿನ್, ಲೇಪು ಹಾಗೂ ಟೀಮ್ ಡ್ಯೂಡ್ಸ್ ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಬಡ್ಡಿ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು ೧೦ ತಂಡಗಳು ಭಾಗವಹಿಸಿದ್ದವು. ಮಂಗಳೂರಿನ ರಹೀಂ ಮತ್ತು ಸುರೇಶ್ ಸುಬ್ರಮಣಿ ಅವರುಗಳು ಪಂದ್ಯಾಟದ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಲೀಗ್ ಮಟ್ಟದಲ್ಲಿ ನಡೆದ ಪಂದ್ಯಾಟದಲ್ಲಿ ಐದು ತಂಡಗಳು ಕೊನೆಯ ಹಂತಕ್ಕೆ ತಲುಪಿದ್ದು ಪ್ರಥಮ ಸೆಮಿಫೈನಲ್ ಪಂದ್ಯ ಬ್ಲಾö್ಯಕ್ ಪ್ಯಾಂರ‍್ಸ್ ಮತ್ತು ರಾಯಲ್ ಬುಲ್ಸ್ ತಂಡಗಳ ಮಧ್ಯೆ ನಡೆದು ಬ್ಲಾö್ಯಕ್ ಪ್ಯಾಂರ‍್ಸ್ ತಂಡವು ರಾಯಲ್ ಬುಲ್ಸ್ ತಂಡವನ್ನು ಮಣಿಸಿ ಫೈನಲ್‌ಗೆ ಅರ್ಹತೆ ಪಡೆಯಿತು.

ದ್ವಿತೀಯ ಸೆಮಿಫೈನಲ್ ಪಂದ್ಯಾಟದಲ್ಲಿ ಭಜರಂಗಿ ತಂಡವು ವಿಜಯವಾಯಿತು. ಅರ್ಹತಾ ಪಂದ್ಯಾಟದಲ್ಲಿ ರಾಯಲ್ ಬುಲ್ಸ್ ಮತ್ತು ಭಜರಂಗಿ ತಂಡಗಳ ಮಧ್ಯೆ ಪಂದ್ಯಾಟವು ನಡೆದು ರಾಯಲ್ ಬುಲ್ಸ್ ತಂಡವು ವಿಜಯವಾಗಿ ಫೈನಲ್‌ಗೆ ಲಗ್ಗೆಯಿಟ್ಟಿತು. ಫೈನಲ್ ಪಂದ್ಯಾಟವು ಬ್ಲಾö್ಯಕ್ ಪ್ಯಾಂರ‍್ಸ್ ತಂಡ ಮತ್ತು ರಾಯಲ್ ಬುಲ್ಸ್ ತಂಡಗಳ ನಡುವೆ ಏರ್ಪಟ್ಟು ಬ್ಲಾö್ಯಕ್ ಪ್ಯಾಂರ‍್ಸ್ ತಂಡವು ರಾಯಲ್ ಬುಲ್ಸ್ ತಂಡವನ್ನು ಮಣಿಸಿ ವಿಜಯಗಳಿಸಿತು. ಪಂದ್ಯಾಟದ ವಿಜೇತರಿಗೆ ಟ್ರೋಫಿ ಮತ್ತು ನಗದು ನೀಡಿ ಗೌರವಿಸಲಾಯಿತು. ಉತ್ತಮ ರೈಡರ್ ರಾಘವ, ಉತ್ತಮ ಆಲ್‌ರೌಂಡರ್ ಶಾಫಿ, ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು. ಟಸ್ರ‍್ಸ್ ತಂಡವು ಪಂದ್ಯಾಟದಲ್ಲಿ ಉತ್ತಮ ತಂಡವಾಗಿ ಹೊರಹೊಮ್ಮಿತು.