ಮಡಿಕೇರಿ, ಫೆ. ೨೫: ಐ.ಆರ್. ಎಸ್. ಶ್ರೇಣಿಯ ಅಧಿಕಾರಿಯಾಗಿ ನಿಯುಕ್ತಿಗೊಂಡು ಗುಜರಾತ್ ರಾಜ್ಯದ ಸೂರತ್‌ನಲ್ಲಿ ಆದಾಯ ತೆರಿಗೆ ಇಲಾಖಾ ಆಯುಕ್ತರಾಗಿದ್ದ ಕೊಡಗಿನ ಯುವ ಅಧಿಕಾರಿ ಡಾ|| ಕೊಟ್ಟಂಗಡ ಪೆಮ್ಮಯ್ಯ ಅವರು ಇದೀಗ ಮತ್ತೊಂದು ಉನ್ನತ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಹೊಸದಾಗಿ ಸೃಷ್ಟಿಸಲಾಗಿರುವ ಫಾರಿನ್ ಅಸೆಟ್ ಇನ್‌ವೆಸ್ಟಿಗೇಷನ್ ಯುನಿಟ್ (ಈಂIU) ಗೆ ಪೆಮ್ಮಯ್ಯ ಅವರನ್ನು ಉಪನಿರ್ದೇಶಕರಾಗಿ (ಡೆಪ್ಯುಟಿಡೈರೆಕ್ಟರ್) ನೇಮಕ ಮಾಡಲಾಗಿದೆ. ಇಡೀ ಗುಜರಾತ್ ರಾಜ್ಯಕ್ಕೆ ಸೇರಿದಂತೆ ಸೂರತ್ ಹಾಗೂ ಅಹಮದಾಬಾದ್‌ನಲ್ಲಿ ಈ ಹುದ್ದೆಯನ್ನು ಸೃಷ್ಟಿಸಲಾಗಿದೆ.