ಸಿದ್ದಾಪುರ, ಫೆ. ೨೬ : ಗುಹ್ಯ ಗ್ರಾಮದ ಸ್ವಾಮಿ ವಿವೇಕಾನಂದ ಯುವಕ ಸಂಘದ ವತಿಯಿಂದ ತಾ. ೨೮ ರಂದು ಗ್ರಾಮ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ವಿಕ್ರಾಂತ್ ತಿಳಿಸಿದ್ದಾರೆ.

ಗುಹ್ಯ ಗ್ರಾಮದ ಶ್ರೀ ಅಗಸ್ತೆö್ಯÃಶ್ವರ ದೇವಾಲಯದ ಮೈದಾನದಲ್ಲಿ ಪ್ರೋ ಕಬಡ್ಡಿ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ೮ ತಂಡಗಳು ಭಾಗವಹಿಸಲಿವೆ. ತಾ. ೨೮ ರಂದು ಬೆಳಿಗ್ಗೆ ೧೦ ಗಂಟೆಗೆ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ ೧ ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಕಬಡ್ಡಿ ಪಂದ್ಯಾಟ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.