ಸುಂಟಿಕೊಪ್ಪ,ಫೆ.೨೬: ಫ್ರೆಂಡ್ಸ್ ಯೂತ್‌ಕ್ಲಬ್, ನಾಕೂರು ಕಾನ್‌ಬೈಲ್‌ನ ೨೧ನೇ ವರ್ಷದ ವಾರ್ಷಿಕ ಕ್ರೀಡೋತ್ಸವ ತಾ.೨೮ ರಂದು ಕಾನ್‌ಬೈಲ್ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಲಿದೆ ಎಂದು ಕ್ಲಬ್‌ನ ಅಧ್ಯಕ್ಷ ಕುಂಞಕೃಷ್ಣ ಹಾಗೂ ಪದಾಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ. ತಾ.೨೮ ರಂದು ಬೆಳಿಗ್ಗೆ ೧೦ ಗಂಟೆಗೆ ರಸ್ತೆ ಓಟ, ೧೧ ಗಂಟೆಯಿAದ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.