ಸಿದ್ದಾಪುರ, ಫೆ. ೨೫: ನೆಲ್ಲಿಹುದಿಕೇರಿ ಗ್ರಾ.ಪಂ. ೭ನೇ ವಾರ್ಡಿನ ಬೆಟ್ಟದಕಾಡುವಿನಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಆಗದೆ ವರ್ಷ ಕಳೆದರೂ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳದೆ ಇರುವುದಕ್ಕೆ ಅಲ್ಲಿನ ಗ್ರಾಮಸ್ಥರು ಗ್ರಾ.ಪಂ. ಕಚೇರಿಗೆ ತೆರಳಿ ಸಮಸ್ಯೆ ಬಗೆಹರಿಸಿ ಕೊಡುವಂತೆ ಮನವಿ ಸಲ್ಲಿಸಿದ್ದಾರೆ.
೫೦೦ಕ್ಕೂ ಅಧಿಕ ಕುಟುಂಬ ವಾಸ ಇರುವ ವಾರ್ಡಿಗೆ ವಾರಕ್ಕೆ ಒಮ್ಮೆ ಮಾತ್ರ ಸರಬರಾಜು ಆಗುತ್ತಿರುವ ನೀರು ಮಣ್ಣು ಮಿಶ್ರಿತವಾಗಿದೆ. ಕಲುಷಿತ ನೀರು ಕುಡಿದು ಮಕ್ಕಳಿಗೆ ಅನಾರೋಗ್ಯ ಕಾಡುತ್ತಿದೆ. ೧೫ ದಿನಗಳ ಒಳಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಖಾಲಿ ಬಿಂದಿಗೆ ಹಿಡಿದು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.
ಮನವಿ ನೀಡಲು ಗ್ರಾ.ಪಂ. ಕಚೇರಿಗೆ ತೆರಳಿದಾಗ ಪಿಡಿಒ ಅನಿಲ್ ಕುಮಾರ್ ಕಚೇರಿಯಲ್ಲಿ ಇರಲಿಲ್ಲ. ಅದಕ್ಕೂ ಆಕ್ರೋಶ ಗೊಂಡ ಗ್ರಾಮಸ್ಥರು ನೆಲ್ಲಿಹುದಿಕೇರಿ ಗ್ರಾ.ಪಂ.ಗೆ ಶಾಶ್ವತ ಪಿಡಿಒ ನೇಮಕ ಆಗಬೇಕೆಂದು ಒತ್ತಾಯಿಸಿದ್ದಾರೆ. ಪಿಡಿಒ ಇಲ್ಲದ ಕಾರಣ ಮನವಿ ಹಿಡಿದು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.
ಮನವಿ ನೀಡಲು ಗ್ರಾ.ಪಂ. ಕಚೇರಿಗೆ ತೆರಳಿದಾಗ ಪಿಡಿಒ ಅನಿಲ್ ಕುಮಾರ್ ಕಚೇರಿಯಲ್ಲಿ ಇರಲಿಲ್ಲ. ಅದಕ್ಕೂ ಆಕ್ರೋಶ ಗೊಂಡ ಗ್ರಾಮಸ್ಥರು ನೆಲ್ಲಿಹುದಿಕೇರಿ ಗ್ರಾ.ಪಂ.ಗೆ ಶಾಶ್ವತ ಪಿಡಿಒ ನೇಮಕ ಆಗಬೇಕೆಂದು ಒತ್ತಾಯಿಸಿದ್ದಾರೆ. ಪಿಡಿಒ ಇಲ್ಲದ ಕಾರಣ ಮನವಿ ಪತ್ರವನ್ನು ಬಿಲ್ ಕಲೆಕ್ಟರ್ ಅಜಿತಾ ಅವರಿಗೆ ಸಲ್ಲಿಸಿದ್ದಾರೆ.
ಈ ಸಂದರ್ಭ ಗ್ರಾಮಸ್ಥರಾದ ಸುರೇಶ್ ನೆಲ್ಲಿಕ್ಕಲ್, ಎನ್.ಸಿ. ಚಂದ್ರಕುಮಾರ್, ಎಂ.ಎಲ್. ರಮೇಶ್, ಕೆ.ಜಿ. ಬಾಲಕೃಷ್ಣ, ಕೆ.ವಿ. ಗಿರೀಶ್, ಎಸ್.ಎಸ್. ಶಂಕರ, ವೈಜು ಜಾನ್, ಟಿ.ಎಸ್. ವಿಜು, ವಿನೋದ್ ಅಗಸ್ಟಿನ್, ಹೆಚ್.ಎಸ್. ಚಂದ್ರು ಮತ್ತಿತರರಿದ್ದರು.