ಪೊನ್ನಂಪೇಟೆ, ಫೆ. ೨೫: ಮಾದಕ ವಸ್ತು ಸೇವನೆ ಮೊದಲು ಮುದ ನೀಡುತ್ತದೆ. ನಂತರ ಅದು ಬದುಕಿಗೆ ಮಾರಕವಾಗಿ ಪರಿಣಮಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮಾದಕ ವಸ್ತುವಿನಿಂದ ದೂರ ಇರಬೇಕು ಎಂದು ಗೋಣಿಕೊಪ್ಪಲು ಪೊಲೀಸ್ ಠಾಣೆಯ ಉಪ ನಿರೀಕ್ಷಕ ಹೆಚ್. ಸುಬ್ಬಯ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗೋಣಿಕೊಪ್ಪಲು ಕಾವೇರಿ ಕಾಲೇಜಿನ, ಮಾದಕ ವಸ್ತು ಮತ್ತು ರ‍್ಯಾಗಿಂಗ್ ನಿಯಂತ್ರಣ ಸಮಿತಿ ಹಾಗೂ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಮಾದಕ ವಸ್ತು ಬಳಕೆ ವಿರುದ್ಧ ಮತ್ತು ರ‍್ಯಾಗಿಂಗ್ ನಿಯಂತ್ರಣದ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಮಾದಕ ವಸ್ತು ಸೇವನೆಯಿಂದ ಮನುಷ್ಯನ ಮೆದುಳಿಗೆ ಹಾನಿ ಉಂಟಾಗುವುದ ರಿಂದ, ತನ್ನ ಮೇಲಿನ ನಿಯಂತ್ರಣ ವನ್ನು ಕಳೆದುಕೊಂಡು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ.
ಮಾದಕ ವ್ಯಸನಕ್ಕೆ ಬಲಿಯಾಗಿ ರುವ ವ್ಯಕ್ತಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ತನ್ನ ಮನೆಯವರು ಕೂಡ ಮಾದಕ ವ್ಯಸನಿಗಳನ್ನು ದೂರವಿಡುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ದಾಸರಾಗದೆ, ಸಹಪಾಠಿಗಳು ಮಾದಕವಸ್ತು ಸೇವನೆ ಮಾಡುವ ಬಗ್ಗೆ ತಿಳಿದು ಬಂದರೆ ಕಾಲೇಜಿನ ಪ್ರಾಂಶುಪಾಲರಿಗೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ತಿಳಿಸುವಂತೆ ಹೇಳಿದರು. ಅದೇ ರೀತಿ ಶಾಲಾ-ಕಾಲೇಜುಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿ ಕೂಡ ಮಾದಕ ವ್ಯಸನಿಗಳನ್ನು ದೂರವಿಡುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ದಾಸರಾಗದೆ, ಸಹಪಾಠಿಗಳು ಮಾದಕವಸ್ತು ಸೇವನೆ ಮಾಡುವ ಬಗ್ಗೆ ತಿಳಿದು ಬಂದರೆ ಕಾಲೇಜಿನ ಪ್ರಾಂಶುಪಾಲರಿಗೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ತಿಳಿಸುವಂತೆ ಹೇಳಿದರು. ಅದೇ ರೀತಿ ಶಾಲಾ-ಕಾಲೇಜುಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿ ಗಳಿಗೆ ರ‍್ಯಾಗಿಂಗ್ ಹೆಸರಿನಲ್ಲಿ ಮಾನಸಿಕ ಅಥವಾ ದೈಹಿಕವಾಗಿ ಕಿರುಕುಳ ನೀಡುವುದು ಅಪರಾಧ ವಾಗಿದ್ದು, ಈ ಬಗ್ಗೆ ದೂರು ಬಂದಲ್ಲಿ ಅಂತಹವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಸಿದರು.
ಕಾವೇರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಬಿ. ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಐಕ್ಯೂಎಸಿ ಸಂಚಾಲಕಿ ಪ್ರೊ. ಎಂ.ಎಸ್. ಭಾರತಿ, ಕಾರ್ಯಕ್ರಮ ಸಂಯೋಜಕಿ ಕೆ.ಕೆ. ಚಿತ್ರಾವತಿ, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಎಂ.ಎ. ಕುಶಾಲಪ್ಪ, ವಿದ್ಯಾರ್ಥಿಗಳು ಹಾಗೂ ಇನ್ನಿತರರು ಹಾಜರಿದ್ದರು.