ಆಲೂರು ಸಿದ್ದಾಪುರ, ಫೆ. ೨೬: ರೈತರು ಸ್ವಂತ ಜಮೀನಿನಲ್ಲಿ ಕುಡಿಯುವ ನೀರು ಮತ್ತು ವ್ಯವಸಾಯಕ್ಕಾಗಿ ಕೊಳವೆಬಾವಿ ತೆಗೆದು ಪಂಪ್‌ಸೆಟ್‌ಗೆ ವಿದ್ಯುತ್ ಇಲಾಖೆಯಿಂದ ಅನುಮತಿ ಪಡೆದು ವಿದ್ಯುತ್ ಸರಬರಾಜು ಅಕ್ರಮವನ್ನು ಸಕ್ರಮಗೊಳಿಸಿ ಮತ್ತು ವಿದ್ಯುತ್ ಇಲಾಖೆಗೆ ಸಾವಿರಾರು ರೂಪಾಯಿ ಪಾವತಿಸುವ ಮೂಲಕ ನೀರಾವರಿ ಸೌಲಭ್ಯ ಪಡೆದಿದ್ದಾರೆ. ಆದರೆ ಇಲಾಖೆ ರೈತರು ಕಾಫಿ ತೋಟಕ್ಕೆ, ಹೂವಿನ ಗಿಡಕ್ಕೆ ನೀರು ಹಾಯಿಸುತ್ತಿದ್ದಾರೆ ಎಂದು ನೋಟೀಸ್ ನೀಡಿ ಈ ಸಂಬAಧ ರೈತರಿಗೆ ಲಕ್ಷಾಂತರ ರೂಪಾಯಿ ದಂಡ ವಿಧಿಸುತ್ತಿದೆ.

ಈ ಕ್ರಮವನ್ನು ವಿರೋಧಿಸಿ ಗೋಣಿಮರೂರು ರೈತರ ಬೋರ್‌ವೆಲ್ ಮಾಲೀಕರ ಸಂಘ ಮತ್ತು ರೈತ ಸಂಘಟನೆ ವತಿಯಿಂದ ಶುಕ್ರವಾರ ಆಲೂರು-ಸಿದ್ದಾಪುರ ಉಪ ಶಾಖಾ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ರೈತರ ಬೋರ್‌ವೆಲ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಎನ್. ಚಂದ್ರಶೇಖರ್ ನೇತೃತ್ವದಲ್ಲಿ ರೈತ ಸಂಘಟನೆ ಪ್ರಮುಖರು ಚೆಸ್ಕಾಂ ಉಪ ಶಾಖಾ ಕಚೇರಿ ಎದುರು ಕೆಪಿಟಿಸಿಎಲ್ ಸಂಸ್ಥೆ ಮತ್ತು ಚೆಸ್ಕಾಂ ಸಂಸ್ಥೆ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಗಾರರ ಪರವಾಗಿ ಮಾತನಾಡಿದ ಚಂದ್ರಶೇಖರ್ ರೈತರು ವ್ಯವಸಾಯಕ್ಕಾಗಿ ಲಕ್ಷಾಂತರ ಖರ್ಚು ಮಾಡಿ ಬೋರ್‌ವೆಲ್ ತೆಗೆದು ವಿದ್ಯುತ್ ಇಲಾಖೆ ಹಣ ಪಾವತಿಸಿ ಪಂಪ್‌ಸೆಟ್‌ಗೆ ವಿದ್ಯುತ್ ಸರಬರಾಜು ಪಡೆದು ವ್ಯವಸಾಯ ಮಾಡುತ್ತಾರೆ.

ಸರಕಾರದಿಂದ ಉಚಿತ ವಿದ್ಯುತ್ ಸೌಲಭ್ಯದ ವ್ಯವಸ್ಥೆಗೆ ಒಳಪಟ್ಟಿದ್ದರೂ ವ್ಯಾಪ್ತಿಗೆ ಸಂಬAಧಪಟ್ಟ ಚೆಸ್ಕಾಂ ನವರು ಕಾಫಿ ತೋಟಕ್ಕೆ ಮತ್ತು ಇನ್ನಿತ್ತರ ನೀರಾವರಿ ವ್ಯವಸ್ಥೆಗೆ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ತೀರ ಬಡ ರೈತನಿಗೂ ಲಕ್ಷಾಂತರ ರೂಪಾಯಿ ದಂಡ ವಿಧಿಸುತ್ತಿದ್ದಾರೆ, ಹಾಗೂ ಚೆಸ್ಕಾಂನವರು ಗೋಣಿಮರೂರು ವ್ಯಾಪ್ತಿಯ ನೂರಾರು ರೈತರಿಗೆ ಬಾಕಿ ಹಣವನ್ನು ೭ ದಿನದ ಒಳಗೆ ಪಾವತಿಸುವಂತೆ ಎಚ್ಚರಿಕೆಯ ನೋಟೀಸನ್ನು ನೀಡಿರುತ್ತಾರೆ. ಸರಕಾರ ರೈತರ ೧೦ ಎಚ್‌ಪಿ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಿಕೊಡುವಂತೆ ಹೇಳಿದೆ ಇದೆ ಪ್ರಕಾರ ಸಂಬAಧಪಟ್ಟ ಚೆಸ್ಕಾಂ ನವರು ರೈತರಿಂದ ಬಾಕಿ ಹಣವನ್ನು ಕಟ್ಟಿಸಿಕೊಳ್ಳಬಾರದು, ರೈತರಿಗೆ ವಿನಾಕರಣ ತೊಂದರೆ ಕೊಡಬಾರದು ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಕಚೇರಿ ಎದುರು ನಿರಂತರ ಧರಣಿಯನ್ನು ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು.

ಅಧಿಕೃತ ಆದೇಶ ಬಂದಿಲ್ಲ

ರೈತರ ಮನವಿ ಸ್ವೀಕರಿಸಿ ಮಾತನಾಡಿದ ಸೋಮವಾರಪೇಟೆ ಚೆಸ್ಕಾಂ ಸಹಾಯಕ ಮುಖ್ಯ ಕಾರ್ಯಪಾಲಕ ಅಭಿಯಂತರ ಧನಂಜಯ್ ಮೇಲಾಧಿಕಾರಿಗಳ ಆದೇಶದಂತೆ ಮತ್ತು ಸಂಸ್ಥೆಯ ನಿಯಮವನ್ನು ನಾವು ಪಾಲಿಸಬೇಕಾಗುತ್ತದೆ, ಮೇಲಾಧಿಕಾರಿ ಗಳ ಆದೇಶದಂತೆ ರೈತರಿಂದ ಬಾಕಿಯಾಗಿರುವ ಪಂಪ್‌ಸೆಟ್ ವಿದ್ಯುತ್ ಬಿಲ್ ಅನ್ನು ಪಾವತಿಸುವಂತೆ ನೋಟೀಸ್ ನೀಡಿದ್ದೇವೆ, ಸರಕಾರದಿಂದ ನಮ್ಮ ಇಲಾಖೆಗೆ ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡುವಂತೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎಂದರು. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳುವ ಹಿನ್ನೆಲೆಯಲ್ಲಿ ರೈತರು ಸಂಬAಧಪಟ್ಟ ಶಾಸಕರು, ಮಂತ್ರಿಗಳಿಗೆ ತಮ್ಮ ಬೇಡಿಕೆ ಬಗ್ಗೆ ಮನವಿ ಪತ್ರ ನೀಡಿ ಗಮನ ಸೆಳೆಯಲು ಮುಂದಾಗಿ, ಈ ಬಗ್ಗೆ ವಿಧಾನ ಸಭೆಯಲ್ಲಿ ಸರಕಾರದ ಮಟ್ಟದಲ್ಲಿ ಪ್ರಸ್ತಾಪವಾಗಿ ಸರಕಾರ ರೈತರ ಕೃಷಿ ನೀರಾವರಿಯ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡುವಂತೆ ಅದಿಕೃತ ಆದೇಶ ನೀಡಿದರೆ ವಿದ್ಯುತ್ ಇಲಾಖೆ ಖಂಡಿತವಾಗಿಯೂ ಉಚಿತ ವಿದ್ಯುತ್ ನೀಡಲು ಸಿದ್ಧವಿದೆ ಬೇಡಿಕೆಯನ್ನು ಜನಪ್ರತಿನಿಧಿಗಳ ಮುಂದಿಡುವAತೆ ಸಲಹೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಪ್ರಮುಖರಾದ ಮೋಹನ್, ಸೋಮಶೇಖರ್, ರೇವಣ್ಣ, ಸಣ್ಣಸ್ವಾಮಿ, ಪುಟ್ಟರಾಜ್, ಮೋಟಯ್ಯ, ಭರತ್, ರಾಧಮ್ಮ, ಸುಮ, ಹಿಮಾಲಾಕ್ಷಿ ಮುಂತಾದವರಿದ್ದರು. ಶನಿವಾರಸಂತೆ ಚೆಸ್ಕಾಂ ಹಿರಿಯ ಸಹಾಯಕ ಅಭಿಯಂತರ ದೀಪಕ್, ಆಲೂರುಸಿದ್ದಾಪುರ ಶಾಖಾಧಿಕಾರಿ ರಮೇಶ್ ಇದ್ದರು.