ಗೋಣಿಕೊಪ್ಪ ವರದಿ, ಫೆ. ೨೬: ಮುಳಿಯ ಜ್ಯುವೆಲ್ಸ್ನಲ್ಲಿ ಅಮೂಲ್ಯ ಡೈಮಂಡ್ಸ್ ಹಾಗೂ ಕಿಸ್ನಾ ರಿಯಲ್ ಡೈಮಂಡ್ ಜ್ಯುವೆಲರಿ ಸಹಯೋಗದಲ್ಲಿ ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಲಾಯಿತು.

ಮಾರ್ಚ್ ೬ ರವರೆಗೆ ನಡೆಯಲಿರುವ ಮೇಳವನ್ನು ವೀರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲೆ ಪುಷ್ಪಾ ಪೂವಮ್ಮ, ವಕೀಲ ಮಚ್ಚಮಾಡ ಟಿ. ಕಾರ್ಯಪ್ಪ, ಪ್ರಮುಖರಾದ ಕೊಣಿಯಂಡ ಕಾವ್ಯ ಸಂಜು, ನಿರ್ಮಲಾ ಬೋಪಣ್ಣ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಮುಳಿಯ ಜ್ಯುವೆಲ್ಸ್ ವ್ಯವಸ್ಥಾಪಕ ಮುಖ್ಯಸ್ಥ ಕೃಷ್ಣ ನಾರಾಯಣ ಮುಳಿಯ ಮಾತನಾಡಿ, ಡೈಮಂಡ್‌ಗೆ ದರ ಹೆಚ್ಚು ಎಂಬ ಭಾವನೆ ಜನರಲ್ಲಿದೆ. ಇದನ್ನು ಹೋಗಲಾಡಿಸಲು ಸಾಮಾನ್ಯ ಜನರಿಗೂ ವಜ್ರ ತಲುಪುವಂತಾ ಗಬೇಕು ಎಂಬ ಚಿಂತನೆಯಲ್ಲಿ ಕೈಗೆಟಕುವ ದರದಲ್ಲಿ ದೊರೆಯುವಂತೆ ಮೇಳ ಆರಂಭಿಸಲಾಗಿದೆ. ಹೊಸತನವನ್ನು ಗೋಣಿಕೊಪ್ಪ ಹೆಚ್ಚು ಬಯಸುವುದರಿಂದ ಗೋಣಿಕೊಪ್ಪ ದಲ್ಲಿ ಮೇಳ ಆರಂಭಿಸಲಾಗಿದೆ ಎಂದರು.

ಮಾರುಕಟ್ಟೆ ವ್ಯವಸ್ಥಾಪಕ ವೇಣುಶರ್ಮ ಮಾತನಾಡಿ, ಗ್ರಾಹಕರ ಹಂಬಲ ಅರಿತು ವಜ್ರಾಭರಣವನ್ನು ನೀಡಲು ಮುಂದಾಗಿದ್ದೇವೆ. ಗುಣಮಟ್ಟ ದೊಂದಿಗೆ ಚಿನ್ನ, ಬೆಳ್ಳಿಯೊಂದಿಗೆ ವಜ್ರವನ್ನು ಕೂಡ ಸ್ವೀಕರಿಸುವ ಮನೋಭಾವ ಕೆಲಸ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭ ಕಿಸ್ನ ಡೈಮಂಡ್ ಮಾರುಕಟ್ಟೆ ವ್ಯವಸ್ಥಾಪಕ ಪ್ರಕಾಶ್, ಮುಳಿಯ ಜ್ಯುವೆಲ್ಸ್ ಸಹಾಯಕ ವ್ಯವಸ್ಥಾಪಕ ಸಂಜೀವ, ಗೋಣಿಕೊಪ್ಪ ಶಾಖಾ ವ್ಯವಸ್ಥಾಪಕ ಅಶೋಕ ಬಂಗೇರ, ಪಾಲುದಾರ ಮೇರಿಯಂಡ ಬೋಪಣ್ಣ ಉಪಸ್ಥಿತರಿದ್ದರು.