ಕಡAಗ, ಫೆ. ೨೫: ಬುಲ್ಲೆಟ್ ಫ್ರೆಂಡ್ಸ್ ಯುವಕ ಸಂಘ ಹಾಗೂ ಎಲಿಯಂಗಾಡ್ ಫ್ರೆಂಡ್ಸ್ ಯುವಕ ಸಂಘ ಇವರ ಜಂಟಿ ಆಶ್ರಯದಲ್ಲಿ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟವನ್ನು ಕೊಂಡAಗೇರಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು. ಅಬ್ದುಲ್ ರೆಹಮಾನ್ (ಅಂದಾಯಿ) ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಾಜಿ ಗೃಹ ಸಚಿವ, ಹಾಲಿ ಶಾಸಕ ರಾಮಲಿಂಗ ರೆಡ್ಡಿ ಭಾಗವಹಿಸಿ ಮಾತನಾಡಿ, ಕೊಡಗು ಜಿಲ್ಲೆ ಕ್ರೀಡೆಯ ತವರೂರು ಎಂದೇ ಹೆಸರು ವಾಸಿಯಾಗಿದೆ. ಕೊಡಗಿನ ಗ್ರಾಮೀಣ ಭಾಗದಲ್ಲಿ ಎಲ್ಲಾ ರೀತಿಯ ಉನ್ನತ ಮಟ್ಟದ ಕ್ರೀಡಾಕೂಟ ನಡೆಯುತ್ತಿದೆ. ಕ್ರೀಡೆಯಲ್ಲಿ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವೀರಾಜ ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೊಪಯ್ಯ ಅವರು ಭಾಗವಹಿಸಿದ್ದರು. ಅಶ್ರಫ್ ಕೆ.ವೈ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಜಿ. ಬೊಪಯ್ಯ ಆಗಮಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಪ್ರಥಮ ಸ್ಥಾನ ಕೆ.ವೈ.ಸಿ. ಕೊಂಡAಗೇರಿ ಪಡೆದಿದ್ದು, ದ್ವಿತೀಯ ಸ್ಥಾನವನ್ನು ಚಾಂಪಿಯನ್ಸ್ ಮೂರ್ನಾಡು ತಂಡ ಪಡೆದರೆ, ಮೂರನೇ ಸ್ಥಾನವನ್ನು ಕುಶಾಲನಗರ ಹೊಸಕೋಟೆ ತಂಡ ಪಡೆದು ಕೊಂಡಿತು. ವೇದಿಕೆಯಲ್ಲಿ ಬೆಂಗಳೂರು ಡಿಸಿಸಿ ಅಧ್ಯಕ್ಷ ಜಿ. ಕೃಷ್ಣಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಬೆಂಗಳೂರು ಡಿಸಿಸಿ ಕಾರ್ಯದರ್ಶಿ ಅಶ್ರಫ್, ಜಿಲ್ಲಾ ಪಂಚಾಯಿತಿ ಸದಸ್ಯ ಮೂಕಂಡ ಶಶಿ ಸುಬ್ರಮಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೀತೆ ಬೊಳ್ಳಿ, ಗ್ರಾಮ ಪಂಚಾಯಿತಿ ಸದಸ್ಯ ಹನೀಫ್ ಹಾಗೂ ದಾನಿಗಳಾದ ಟಿ.ಎಸ್.ಕೆ. ಅಹಮದ್ ಮೈಸಿ, ಕತ್ತನೀರ ಮತ್ತು ಇತರರು ಹಾಜರಿದ್ದರು.