ಮಡಿಕೇರಿ, ಫೆ. ೨೫: ಕೊಲ್ಕತ್ತಾದ ನಿವಾಸಿ ಕಿರುಮೋಹನ್ ರಾಯ್ ಅವರು ಕಾಣೆಯಾಗಿರುವ ಕುರಿತು ಮದೆನಾಡು ನಿವಾಸಿ ರಫೀಕ್ ಅಹ್ಮದ್ ಹುಲ್ಯಾಳ ಅವರು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ರಫೀಕ್ ಅವರು ಮದೆನಾಡಿನಲ್ಲಿ ಕಾಂಟ್ರಾö್ಯಕ್ಟ್ ಕೆಲಸ ಒಂದನ್ನು ತೆಗೆದುಕೊಂಡಿದ್ದು, ಈ ಸಂಬAಧ ಕೆಲಸಕ್ಕಾಗಿ ಕೊಲ್ಕತ್ತಾದಿಂದ ೧೪ ಮಂದಿಯನ್ನು ಕರೆಸಿದ್ದಾರೆ. ಈ ಪೈಕಿ ಒಬ್ಬರಾದ ಕಿರುಮೋಹನ್ ರಾಯ್ ಅವರು ತಾ.೧೧ ರಂದು ಮದೆನಾಡಿನ ತಮ್ಮ ವಾಸದ ಶೆಡ್ಡಿನಿಂದ ಹೊರಗೆ ತೆರಳಿದವನು ಇನ್ನು ಕೂಡ ವಾಪಸ್ಸು ಬಂದಿಲ್ಲ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ವ್ಯಕ್ತಿ ಬಗ್ಗೆ ಮಾಹಿತಿ ದೊರೆತಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ, ದೂ. ೦೮೨೭೨-೨೨೮೭೭೭ ಅನ್ನು ಸಂಪರ್ಕಿಸಲು ಕೋರಿದೆ