ನಾಪೋಕ್ಲು, ಫೆ. ೨೬: ಕೊರೊನಾ ಹೋಗಿದೆ ಎಂದು ಕೊಡಗಿನ ಜನ ಎಂದಿನ ಬದುಕಿಗೆ ಹೊಂದಿಕೊಳ್ಳುವ ಸಮಯದಲ್ಲಿ ನಾನು ಕೇರಳ ರಾಜ್ಯದಿಂದ ನಿಮ್ಮ ಜಿಲ್ಲೆ ಪ್ರವೇಶಿಸುತ್ತೇನೆ ಎಂಬAತೆ ನಮ್ಮ ಜಿಲ್ಲೆಯ ಗಡಿಗೆ ಹೊಂದಿಕೊAಡಿರುವ ಕೇರಳ ರಾಜ್ಯದಲ್ಲಿ ಕೊರೊನಾ ಮತ್ತೆ ತನ್ನ ಅಟ್ಟಹಾಸ ಮೆರೆಯಲು ಆರಂಭಿಸಿದೆ. ಕೇರಳ ರಾಜ್ಯದ ಹೆಚ್ಚಿನ ಜನ ವ್ಯಾಪಾರ ಮತ್ತಿತರ ನಂಟಿನಿAದ ಜಿಲ್ಲೆಗೆ ನಿತ್ಯ ಆಗಮಿಸುತ್ತಿದ್ದಾರೆ. ಅದರೊಂದಿಗೆ ತಾ. ೨೬ ರಿಂದ ಎಮ್ಮೆಮಾಡು ಉರೂಸ್ ಆರಂಭಗೊಳ್ಳಲಿದೆ. ಉರೂಸ್ಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಇದರಿಂದ ಮತ್ತೆ ಆತಂಕ ಸೃಷ್ಟಿಯಾಗಿದೆ.
ಕಟ್ಟುನಿಟ್ಟಿನ ಕ್ರಮ: ಉರೂಸ್ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆಯ ಭಕ್ತರು ಕೇರಳದಿಂದ ಆಗಮಿಸುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವದರಿಂದ ಜಿಲ್ಲಾಡಳಿತವು ಕೆಲವು ನಿರ್ಬಂಧಗಳನ್ನು ಹೇರಿದೆ. ಉರೂಸ್ ಹಿನ್ನೆಲೆಯಲ್ಲಿ ಕೇರಳದಿಂದ ಎಮ್ಮೆಮಾಡು ಗ್ರಾಮಕ್ಕೆ ಆಗಮಿಸುವವರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಗುರುವಾರ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಅಂಗಡಿ, ಹೊಟೇಲ್ ಮಾಲೀಕರ ಕೋವಿಡ್ ಪರೀಕ್ಷೆಯನ್ನು ನಡೆಸಿದರು. ಶಾಲಾ ವಿದ್ಯಾರ್ಥಿಗಳ ಕೋವಿಡ್ ತಪಾಸಣೆ ನಡೆಸಲಾಯಿತು.
- ಪಿ.ವಿ. ಪ್ರಭಾಕರ್