ಚೆಟ್ಟಳ್ಳಿ, ಫೆ. ೨೭: ಚೆಟ್ಟಳ್ಳಿ ಶ್ರೀಮಂಗಲ ಭಗವತಿ ದೇವಾಲಯದ ನೂತನ ಜೀರ್ಣೋದ್ಧಾರ ಕಾರ್ಯ ನಡೆದು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ಶಿಳುವಾರಮೂಲೆ ಮನೆ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಶಿವ ಸುಬ್ರಮಣ್ಯ ಭಟ್ ರವರ ನೇತೃತ್ವದಲ್ಲಿ ಶ್ರೀಭಗವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪೂರ್ವಾಹ್ನ ಗಣಪತಿ ಹೋಮ, ಶ್ರೀಭಗವತಿ ದೇವಿಗೆ ಅಲಂಕಾರ ಮಂತ್ರಘೋಶಗಳೊAದಿಗೆ ವಿಶೇಷಪೂಜೆ, ಕುಂಬಾಭಿಶೇಕ, ವಿಘ್ನೇಶ್ವರ, ಬ್ರಹ್ಮರಾಕ್ಷಸ, ಕ್ಷೇತ್ರಪಾಲಕ, ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯ ಸಮಿತಿಯ ಅಧ್ಯಕ್ಷ ಮುಳ್ಳಂಡ ಪ್ರಭ ತಿಮ್ಮಯ್ಯ ಊರಿಗೆ ಒಳಿತನ್ನು ಮಾಡಿ ಕಾಪಾಡೆಂದು ಬೇಡಿಕೊಂಡರು. ಊರಿನವರು ಭಕ್ತಾದಿಗಳು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.