ಕುಶಾಲನಗರ, ಫೆ. ೨೬: ನಗರ ಠಾಣಾ ವ್ಯಾಪ್ತಿಯ ನಂಜುAಡೇಶ್ವರ ಬಡಾವಣೆ ಹಾಗೂ ಆದರ್ಶ ದ್ರಾವಿಡ ಕಾಲೋನಿಯ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಸಮೀಪದ ದುದ್ದಗಲ್ ಗ್ರಾಮದ ಕಿರಣ್ ಕುಮಾರ್ (೨೨) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿತನಿಂದ ೨ ಲ್ಯಾಪ್‌ಟಾಪ್, ರೂ ೬,೫೦೦ ನಗದು, ಚಿನ್ನದ ಕೈಬಳೆ, ಕರಿಮಣಿ ಸರ, ಮೊಬೈಲ್, ವಾಚ್ ಹಾಗೂ ಕೃತ್ಯಕ್ಕೆ ಬಳಸಿದ ಕಬ್ಬಿಣದ ಹಾರೆಯನ್ನು ವಶಪಡಿಸಿಕೊಳ್ಳಲಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಆರೋಪಿ ಕಿರಣ್ ಕುಶಾಲನಗರ, ಫೆ. ೨೬: ನಗರ ಠಾಣಾ ವ್ಯಾಪ್ತಿಯ ನಂಜುAಡೇಶ್ವರ ಬಡಾವಣೆ ಹಾಗೂ ಆದರ್ಶ ದ್ರಾವಿಡ ಕಾಲೋನಿಯ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಸಮೀಪದ ದುದ್ದಗಲ್ ಗ್ರಾಮದ ಕಿರಣ್ ಕುಮಾರ್ (೨೨) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿತನಿಂದ ೨ ಲ್ಯಾಪ್‌ಟಾಪ್, ರೂ ೬,೫೦೦ ನಗದು, ಚಿನ್ನದ ಕೈಬಳೆ, ಕರಿಮಣಿ ಸರ, ಮೊಬೈಲ್, ವಾಚ್ ಹಾಗೂ ಕೃತ್ಯಕ್ಕೆ ಬಳಸಿದ ಕಬ್ಬಿಣದ ಹಾರೆಯನ್ನು ವಶಪಡಿಸಿಕೊಳ್ಳಲಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಆರೋಪಿ ಕಿರಣ್ ಕುಮಾರ್ ಹಾರೆ ಬಳಸಿ ಬೀಗ ಒಡೆದು ಮನೆಗಳ್ಳತನ ಮಾಡಿದ್ದ, ಈ ಸಂಬAಧ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿ ಸೆರೆಗೆ ಬಲೆ ಬೀಸಲಾಗಿತ್ತು. ಆರೋಪಿಯನ್ನು ನಗರದ ಮಾರ್ಕೇಟ್ ಬಳಿ ಗುಮಾನಿ ಹಿನ್ನೆಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ತಿಳಿದು ಬಂದಿದೆ.

ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಸೋಮವಾರಪೇಟೆ ಡಿ.ವೈ.ಎಸ್ಪಿ ಶೈಲೇಂದ್ರ ಮಾರ್ಗದರ್ಶನ, ಕುಶಾಲನಗರ ಸಿ.ಪಿ.ಐ ಮಹೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಗಣೇಶ್, ಎ.ಎಸ್.ಐ ಗೋಪಾಲ, ಸಿಬ್ಬಂದಿಗಳಾದ ಸುದೀಶ್ ಕುಮಾರ್, ರಂಜಿತ್, ಅಪರಾಧ ಪತ್ತೆದಳದ ಬಿ.ಎಸ್ ದಯಾನಂದ, ಸಜಿ, ಪ್ರಕಾಶ್, ಉಮೇಶ್ ಇದ್ದರು.